Home Advertisement
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ರಾಜಕಾಲುವೆಗೆ ಬಿದ್ದ ಕಾರು

ರಾಜಕಾಲುವೆಗೆ ಬಿದ್ದ ಕಾರು

0
147

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ೬೬ರ ಕೋಡಿಕಲ್ ಕ್ರಾಸ್ ಬಳಿಯಿರುವ ರಾಜಕಾಲುವೆಗೆ ಸಂಚಾರದಲ್ಲಿದ್ದ ಕಾರೊಂದು ಬಿದ್ದಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಈ ರಾಜಕಾಲುವೆಯಲ್ಲಿ ಹೂಳೆತ್ತುವ ಕಾರ್ಯ ನಡೆಯುತ್ತಿತ್ತು. ಅದಕ್ಕಾಗಿ ರಾಜಕಾಲುವೆ ಬದಿಯಲ್ಲಿ ಬೆಳೆದಿದ್ದ ಪೊದೆಗಿಡಗಳನ್ನು ತೆಗೆದು ಮರಳು ತುಂಬಿದ ಚೀಲಗಳನ್ನು ತಡೆಯಾಗಿ ಇಡಲಾಗಿತ್ತು. ಆದರೆ ಸಂಚಾರದಲ್ಲಿದ್ದ ಕಾರೊಂದು ನಿಯಂತ್ರಣ ಕಳೆದು ರಾಜಕಾಲುವೆಗೆ ಬಿದ್ದಿದೆ. ಅದೃಷ್ಟವಶಾತ್ ರಾಜಕಾಲುವೆಯಲ್ಲಿ ನೀರಿನಮಟ್ಟ ಕಡಿಮೆ ಇದ್ದಿದ್ದರಿಂದ ಕಾರಿನಲ್ಲಿದ್ದವರು ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾರೆ.