SK Home Ad
Home ನಮ್ಮ ಜಿಲ್ಲೆ ಗದಗ ಜನಾಕ್ರೋಶಕ್ಕೆ ನರಿ ಬಲಿ

ಜನಾಕ್ರೋಶಕ್ಕೆ ನರಿ ಬಲಿ

0
210

ಗದಗ: ಜನರ ಮೇಲೆ ದಾಳಿ ನಡೆಸುತ್ತಿದ್ದ ನರಿಯನ್ನು ಅಟ್ಟಾಡಿಸಿ ಕೊಂದ ಘಟನೆ ಪಟ್ಟಣದಲ್ಲಿ ಇಂದು ನಡೆದಿದೆ.
ಬುಧವಾರ ಬೆಳಗ್ಗೆ ಘಟನೆ ನಡೆದಿದ್ದು, ಈ ನರಿ ಹಲವು ಜನರನ್ನು ಕಚ್ಚಿ ಗಾಯಗೊಳಿಸಿತ್ತು. ಮಂಗಳವಾರ ಗದಗ ತಾಲೂಕಿನ ಅಸುಂಡಿ ಗ್ರಾಮದ ಹುಲಕೋಟಿ ಸಹಕಾರ ಸಂಸ್ಥೆಯ ಪ್ರೌಢಶಾಲೆಯ ಆವರಣದಲ್ಲಿ ಕಾಣಿಸಿಕೊಂಡ ನರಿ ಸಾರ್ವಜನಿಕರನ್ನು ಚಿಂತೆಗೀಡು ಮಾಡಿತ್ತು. ತದನಂತರ ಅರಣ್ಯ ಇಲಾಖೆ ಸಿಬ್ಬಂದಿ ನರಿಯನ್ನು ಬಲೆಯೊಳಗೆ ಸೆರೆ ಹಿಡಿದು ಬಿಂಕದಕಟ್ಟಿ ಮೃಗಾಲಯಕ್ಕೆ ಬಿಟ್ಟಿದ್ದರು. ಆದರೆ ಮತ್ತೆ ಗಜೇಂದ್ರಗಡ ಪಟ್ಟಣದಲ್ಲಿ ಕಾಣಿಸಿಕೊಂಡಿತ್ತು. ಈಗ ಜನಾಕ್ರೋಶಕ್ಕೆ ಅದು ಬಲಿಯಾಗಿದೆ.