SK Home Ad
Home ತಾಜಾ ಸುದ್ದಿ ದೇವರಾಜೇಗೌಡ ಹೊರಗಿದ್ರೆ ಸರ್ಕಾರಕ್ಕೆ ಭಯ

ದೇವರಾಜೇಗೌಡ ಹೊರಗಿದ್ರೆ ಸರ್ಕಾರಕ್ಕೆ ಭಯ

0
106
ಆರ್. ಅಶೋಕ್

ಬೆಂಗಳೂರು: ದೇವರಾಜೇಗೌಡರ ಬಳಿ ದಾಖಲೆಗಳಿವೆ ಅದಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಪದ್ಮನಾಭನಗರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮನೆಗೆ ಭೇಟಿ ನೀಡಿ ಅವರ ಜನ್ಮದಿನಕ್ಕೆ ಶುಭಕೋರಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವರಾಜೇಗೌಡ ಅವರು ಹೊರಗಿದ್ರೆ ದಾಖಲೆ ಬಿಡುಗಡೆ ಮಾಡ್ತಾರೆ ಎಂಬ ಭಯ ಸರ್ಕಾರಕ್ಕಿದೆ. ಅವರನ್ನು ಬಿಟ್ರೆ ಸರಣಿ ದಾಖಲೆ ಬಿಡ್ತಾರೆ. ಸರ್ಕಾರಕ್ಕೆ ಮುಜುಗರ ಆಗುತ್ತೆ ಎಂದು ಬಂಧಿಸಿದ್ದಾರೆ ಎಂದರು.
ಇನ್ನು ದೇವರಾಜೇಗೌಡ ಅವರು ಆರೋಪಿಸಿರುವುದು ಎಲ್ಲಾ ನೂರಕ್ಕೆ ನೂರು ಸತ್ಯ. ಅದಕ್ಕೆಲ್ಲ ಅವರ ಬಳಿ ಸಾಕ್ಷಿ ಇದೆ ಎನಿಸುತ್ತಿದೆ ಎಂದರು.