SK Home Ad
Home ನಮ್ಮ ಜಿಲ್ಲೆ ಯುವಕ ಆತ್ಮಹತ್ಯೆ

ಯುವಕ ಆತ್ಮಹತ್ಯೆ

0
171
ಆತ್ಮಹತ್ಯೆ

ಕುಂದಾಪುರ: ನೇಣು ಬಿಗಿದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆರಾಡಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಶಶಿಕಾಂತ (೨೫) ಆತ್ಮಹತ್ಯೆ ಮಾಡಿಕೊಂಡ ಯುವಕ.
ಅಮರ ಶೆಟ್ಟಿ ಎಂಬವರು ಕಳೆದ ಸಂಜೆ ಕೆರಾಡಿಯಿಂದ ಚಿತ್ತೂರು ಕಡೆಗೆ ಹೋಗುತ್ತಿರುವಾಗ ಕೆರಾಡಿ ಗ್ರಾಮದ ಚಪ್ಪರಮಕ್ಕಿ ಕೂರ್ಕೊಗೆ ಎಂಬಲ್ಲಿ ನಿರ್ಜನ ಪ್ರದೇಶದ ರಸ್ತೆ ಬದಿಯಲ್ಲಿ ಅವರ ಸ್ನೇಹಿತ ಶಶಿಕಾಂತರ ಬೈಕ್ ನಿಂತಿರುವುದು ಗಮನಕ್ಕೆ ಬಂದಿದೆ.ಅವರು ಶಶಿಕಾಂತನ ಮೊಬೈಲ್‌ಗೆ ಕರೆ ಮಾಡಿದ್ದು, ಅವರು ಸ್ವೀಕರಿಸದ್ದಿದಾಗ ಇನ್ನುಳಿದ ಸ್ನೇಹಿತರಿಗೆ ಕರೆಮಾಡಿ ವಿಚಾರ ತಿಳಿಸಿ ಎಲ್ಲರೂ ಸೇರಿ ಅಭಯಾರಣ್ಯದಲ್ಲಿ ಹುಡುಕಾಡಿದಾಗ ಶಶಿಕಾಂತರ ಮೃತದೇಹ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.