ರೇಣುಕಾಸ್ವಾಮಿ ಕೊಲೆ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಪಟ್ಟಣಗೆರೆ ಸೆಕ್ಯುರೆಟಿ ಗಾರ್ಡ್ ನೀಡಿರುವ ಹೇಳಿಕೆಯಿಂದ ನಟ ದರ್ಶನ್ ಗೆ ಜಾಮಿನು ಸಿಗುತ್ತಾ ಅಥವಾ ಪ್ರಕರಣದಲ್ಲಿ ಮತ್ತಷ್ಟು ಸಂಕಷ್ಟ ಎದುರಾಗುತ್ತಾ ಎಂಬುದು ಕುತುಹಲ ನ್ಯಾಯಾಲಯದಲ್ಲಿ ನಡೆದ ಸಾಕ್ಷಿ ವಿಚಾರನೆ ಮಹತ್ವದ ತಿರುವು ಪಡೆದುಕೊಂಡಿದ್ದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಹಲವು ಆರೋಪಿಗಳ ವಿರುದ್ಧ ವಿಚಾರಣೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ಹೇಳಿಕೆಗಳನ್ನು ನ್ಯಾಯಾಲಯ ದಾಖಲಿಸಿಕೊಳ್ಳುತ್ತಿದೆ. ಈ ಹಿನ್ನೆಲೆ ಪಟ್ಟಣಗೆರೆ ಶೆಡ್ನ ಸೆಕ್ಯುರಿಟಿ ಗಾರ್ಡ್ ಆಗಿದ್ದ ನರೇಂದ್ರ ಸಿಂಗ್ ಅವರ ಸಾಕ್ಷಿ ಹೇಳಿಕೆ ಕುತೂಹಲ ಮೂಡಿಸಿದೆ.
ಸೆಕ್ಯುರೆಟಿ ಗಾರ್ಡ್ ನರೇಂದ್ರ ಸಿಂಗ್ ಹೇಳ್ಳಿದ್ದಾದರೆ ಏನು?
ಪಟ್ಟಣಗೆರೆ ಶೆಡ್ ನಲ್ಲಿ ಸೆಕ್ಯುರೆಟಿ ಗಾರ್ಡ್ಯಾಗಿ ಕಾರ್ಯನಿರ್ವಹಿಸುತ್ತಿದ್ದ ನರೇಂದ್ರ ಸಿಂಗ್, ಕೃತ್ಯ ನಡೆದ ದಿನದಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ಹಾಜರಿದ್ದರು, ಶೆಡ್ ಬರುವ ವಾಹನಗಳ ಪ್ರವೇಶವನ್ನು ದಾಖಲಿಸಿಕೊಳ್ಳುವುದು ಅವರ ಕಾರ್ಯ ನಿರ್ವಹಿಸುತ್ತಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಶಡ್ ಗೆ ವಾಹನಗಳು ಬಂದು ಹೋಗುವ ಸಂದರ್ಭದಲ್ಲಿ ನಟ ದರ್ಶನ್ ಯಾರು ಎಂಬುದೇ ತಮಗೆ ತಿಳಿದಿಲ್ಲ ಎಂದು ನರೇಂದ್ರ ಸಿಂಗ್ ಹೇಳಿದ್ದಾರೆ. ಅಲ್ಲದೆ, ದರ್ಶನ್ ಅವರನ್ನು ತಾನು ನೋಡಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಕೃತ್ಯ ನಡೆದ ದಿನ ಶೆಡ್ನಲ್ಲಿ ಏನು ನಡೆಯತು ಎಂಬುದು ನನಗೆ ಮಾಹಿತಿ ಇಲ್ಲ ನಾನು ಬೆಳಗ್ಗೆ 8 ಗಂಟೆಗೆ ಬಂದು ರಾತ್ರಿ 8 ಗಂಟೆ ತನಕ ಕಾರ್ಯದಲ್ಲಿದ್ದರು ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದರು.
ಒಬ್ಬ ಸಾಕ್ಷಿ ದರ್ಶನ್ ಅವರನ್ನು ನೋಡಿಲ್ಲ ಅಥವಾ ಘಟನೆ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿರುವುದರಿಂದ ಮಾತ್ರ ಪ್ರಕರಣದ ದಿಕ್ಕು ಬದಲಾಗುತ್ತದೆ ಅಥವಾ ಆರೋಪಿಗಳಿಗೆ ಕಾನೂನುಬದ್ಧ ರಿಲೀಫ್ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರಕರಣದ ಸಂಪೂರ್ಣ ಸಾಕ್ಷ್ಯಗಳು, ಇತರ ಸಾಕ್ಷಿಗಳ ಹೇಳಿಕೆಗಳು ಮತ್ತು ನ್ಯಾಯಾಲಯದ ಮುಂದೆ ಮಂಡನೆಯಾಗುವ ದಾಖಲೆಗಳನ್ನು ಆಧರಿಸಿಯೇ ಅಂತಿಮ ತೀರ್ಮಾನವಾಗಲಿದೆ.




















