SK Home Ad
Home ಕ್ರೀಡೆ ಪಾಕಿಸ್ತಾನ್ ಆಲೌಟ್: ಭಾರತದ ಗೆಲುವಿಗೆ 314 ರನ್‌‌ ಟಾರ್ಗೆಟ್

ಪಾಕಿಸ್ತಾನ್ ಆಲೌಟ್: ಭಾರತದ ಗೆಲುವಿಗೆ 314 ರನ್‌‌ ಟಾರ್ಗೆಟ್

0
50

ದೋಹಾ: ಎಸಿಸಿ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯ ಭಾರತ ಎ ಮತ್ತು ಪಾಕಿಸ್ತಾನ ಎ ನಡುವಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ ಬೃಹತ್ ಮೊತ್ತ ಕಲೆಹಾಕಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಎ ತಂಡ 49.2 ಓವರ್‌ಗಳಲ್ಲಿ 313 ರನ್‌ಗಳಿಗೆ ಆಲೌಟ್ ಆಗಿದ್ದು, ಭಾರತ ಎ ತಂಡಕ್ಕೆ ಗೆಲುವಿಗಾಗಿ 314 ರನ್‌ಗಳ ಗುರಿ ನೀಡಿದೆ.

ಪಾಕಿಸ್ತಾನ ಪರ ಹಸನ್ ನವಾಜ್, ಮಾಜ್ ಸದಾಕತ್ ಹಾಗೂ ಫರ್ಹಾನ್ ಯೂಸಫ್ ಅರ್ಧಶತಕ ಸಿಡಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಹಸನ್ ನವಾಜ್ 82 ಎಸೆತಗಳಲ್ಲಿ 79 ರನ್ ಗಳಿಸಿದರೆ, ಮಾಜ್ ಸದಾಕತ್ 63 ಎಸೆತಗಳಲ್ಲಿ 59 ರನ್ ಗಳಿಸಿದರು. ಫರ್ಹಾನ್ ಯೂಸಫ್ 48 ಎಸೆತಗಳಲ್ಲಿ 56 ರನ್ ಬಾರಿಸಿದರು. ಶಮೈಲ್ ಹುಸೇನ್ 23 ಎಸೆತಗಳಲ್ಲಿ 33 ರನ್ ಸಿಡಿಸಿ ವೇಗದ ಆರಂಭ ನೀಡಿದರು.

ಇನ್ನು ಮೊಹಮ್ಮದ್ ಇಮ್ರಾನ್ ರಾಂಧವಾ 14 ಎಸೆತಗಳಲ್ಲಿ 23 ರನ್ ಗಳಿಸಿದರೆ, ನಾಯಕ ಅಬ್ದುಲ್ ಸಮದ್ 35 ಎಸೆತಗಳಲ್ಲಿ 28 ರನ್ ಕೊಡುಗೆ ನೀಡಿ ತಂಡಕ್ಕೆ ಆಸರೆಯಾದರು. ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ.

ಭಾರತ ಎ ಪರ ಬೌಲಿಂಗ್‌ನಲ್ಲಿ ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ಸೂರ್ಯಂಶ್ ಶೆಡ್ಗೆ ಹಾಗೂ ವಿಪ್ರಾಜ್ ನಿಗಮ್ ತಲಾ ಎರಡು ವಿಕೆಟ್ ಪಡೆದರು. ಆಯುಷ್ ಬದೋನಿ ಒಂದು ವಿಕೆಟ್ ಕಬಳಿಸಿದರು.