SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ 13: ‘ಫೈರ್’ ಹೋಗಿ ‘ಫ್ಲವರ್’ ಆದ ಮಂಜ;‘ಸೂಪರ್ ಸಂಡೇ’ಯಲ್ಲಿ ಕಾಲೆಳೆದು ಸುದೀಪ್ ತಮಾಷೆ!

ಬಿಗ್ ಬಾಸ್ 13: ‘ಫೈರ್’ ಹೋಗಿ ‘ಫ್ಲವರ್’ ಆದ ಮಂಜ;‘ಸೂಪರ್ ಸಂಡೇ’ಯಲ್ಲಿ ಕಾಲೆಳೆದು ಸುದೀಪ್ ತಮಾಷೆ!

0
6

BBK13: ‘ಬಿಗ್ ಬಾಸ್ ಕನ್ನಡ ಸೀಸನ್-13’ರ ‘ಸೂಪರ್ ಸಂಡೇ ವಿತ್ ಸುದೀಪ್’ ಸಂಚಿಕೆಯ ಕಾಮಿಡಿ ಪ್ರೋಮೋ ಬಿಡುಗಡೆಯಾಗಿದ್ದು, ವೀಕ್ಷಕರಲ್ಲಿ ಭಾರಿ ನಗು ಹಾಗೂ ಕುತೂಹಲ ಮೂಡಿಸಿದೆ. ಹಿಂದೆ ಎಲ್ಲರ ವಿರುದ್ಧ ಕಿಡಿಕಾರುತ್ತಿದ್ದ ಮಾಡ್ರನ್ ಮಹಾಕವಿ ಮಂಜ ಈಗ ಸಾಕಷ್ಟು ಸೌಮ್ಯವಾಗಿ ಬದಲಾಗಿರುವುದನ್ನು ಕಂಡು ಕಿಚ್ಚ ಸುದೀಪ್ ಕಾಲೆಳೆದಿದ್ದಾರೆ. ಹಿಂದೆ ಗತ್ತಿನ ಧ್ವನಿಯಲ್ಲಿ ಕೇಳಿಬರುತ್ತಿದ್ದ ಮಾತು ಈಗ ಮೆದು ಧ್ವನಿಗೆ ತಿರುಗಿದೆ; ಆ ಗತ್ತು ಎಲ್ಲಿ ಹೋಯಿತು ಎಂದು ಸುದೀಪ್ ತಮಾಷೆಯಾಗಿ ಪ್ರಶ್ನಿಸಿದ್ದಾರೆ.

ಈ ವಿಚಾರವಾಗಿ ಗಾನವಿ ಅವರನ್ನು ಸುದೀಪ್ ಪ್ರಶ್ನಿಸಿದಾಗ, ಹುಡುಗರು ಹೇಗೇ ಇದ್ದರೂ ಹುಡುಗಿಯೊಬ್ಬಳು ಹತ್ತಿರವಾದಾಗ ಅಥವಾ ಕಂಡಾಗ ಮೆದುವಾಗುತ್ತಾರೆ ಎಂದು ಗಾನವಿ ನಾಚುತ್ತಾ ಉತ್ತರಿಸಿದ್ದಾರೆ. ಇದಕ್ಕೆ ಮಂಜ ಕೂಡ ನಾಚಿಕೊಂಡಿರುವ ದೃಶ್ಯ ಪ್ರೋಮೋದಲ್ಲಿ ಗಮನ ಸೆಳೆದಿದೆ. ಮತ್ತೊಂದೆಡೆ ಆಸಿಯಾ ಕೂಡ, ಹೊರಗೆ ಹೋಗುವಾಗ ಫೈರ್‌ನಂತೆ ಹೋಗಿದ್ದ ಮಂಜ ಒಳಗೆ ಬರುವಾಗ ಫ್ಲವರ್ ಆಗಿ ಬಂದಿದ್ದಾರೆ ಎಂದು ಕಾಲೆಳೆದಿದ್ದಾರೆ.

ಗಾನವಿ ಅವರೊಂದಿಗೆ ಮಂಜ ಆಪ್ತವಾಗಿರುವುದು ಮತ್ತು ಮೃದುವಾಗಿ ಮಾತನಾಡುತ್ತಿರುವುದನ್ನು ಮನೆಮಂದಿಯೂ ಗಮನಿಸಿದ್ದಾರೆ. ಇದನ್ನು ನೋಡಿದ ವೀಕ್ಷಕರು, ಮಂಜ ಅವರಿಗೆ ಗಾನವಿ ಮೇಲೆ ಸಾಫ್ಟ್ ಕಾರ್ನರ್ ಅಥವಾ ಲವ್ ಆಗಿರಬಹುದೇ ಎಂಬ ಚರ್ಚೆಯಲ್ಲಿ ತೊಡಗಿದ್ದಾರೆ. ಒಟ್ಟಾರೆಯಾಗಿ, ಮಂಜ ಅವರ ಈ ಬದಲಾವಣೆಯ ಹಿಂದಿನ ಗುಟ್ಟೇನು ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.