SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ ಮನೆಯಲ್ಲಿ ಜಗಳದ ಪರಾಕಾಷ್ಠೆ: ‘ಹೊಡೆದು ಸಾಯಿಸ್ತೀನಿ’ ಎಂದ ಗಾನವಿ, ಆಸಿಯಾ ಮೇಲೆ ಬಕೆಟ್...

ಬಿಗ್ ಬಾಸ್ ಮನೆಯಲ್ಲಿ ಜಗಳದ ಪರಾಕಾಷ್ಠೆ: ‘ಹೊಡೆದು ಸಾಯಿಸ್ತೀನಿ’ ಎಂದ ಗಾನವಿ, ಆಸಿಯಾ ಮೇಲೆ ಬಕೆಟ್ ಎತ್ತಿದ ಸೌಂದರ್ಯ!

0
6

BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ ಯುವರಾಣಿ ಟಾಸ್ಕ್ ಹಾಗೂ ನಾಮಿನೇಷನ್ ಪ್ರಕ್ರಿಯೆ ವೇಳೆ ಸ್ಪರ್ಧಿಗಳ ನಡುವಿನ ಜಗಳ ಎಲ್ಲೆ ಮೀರಿದೆ. ವೈಯಕ್ತಿಕ ನಿಂದನೆ, ಪ್ರಾಣಬೆದರಿಕೆ ಹಾಗೂ ಪರಸ್ಪರ ಹಲ್ಲೆಗೆ ಮುಂದಾಗುವ ಮೂಲಕ ಗಾನವಿ ಗೌಡ, ಸೌಂದರ್ಯ ಶೆಟ್ಟಿ, ಆಸಿಯಾ ಫಿರ್ದೋಸ್ ಹಾಗೂ ಮಂಜ ವೀಕ್ಷಕರ ತೀವ್ರ ಅಸಮಾಧಾನಕ್ಕೆ ಗುರಿಯಾಗಿದ್ದಾರೆ.

ಮೊದಲಿಗೆ ಜಗದೀಶ್ ಜೊತೆ ಜಗಳಕ್ಕಿಳಿದ ಗಾನವಿ ಮತ್ತು ಮಂಜ, “ವಠಾರದ ಆಂಟಿ ರೀತಿ ಇದ್ದೀಯ, ಮೊದಲು ಗಂಡಸಾಗಿ ಮಾತನಾಡುವುದನ್ನು ಕಲಿ” ಎಂದು ಅವಮಾನಿಸಿದ್ದಾರೆ. ಇದಕ್ಕೆ ಜಗದೀಶ್ “ಮಾನ ಗೆಟ್ಟವಳು ನೀನು” ಎಂದು ತಿರುಗೇಟು ನೀಡುತ್ತಿದ್ದಂತೆಯೇ ಗಾನವಿ ಸಂತ್ರಸ್ತೆಯಂತೆ ಡ್ರಾಮಾ ಮಾಡಿದ್ದಾರೆ. ಬಳಿಕ ಸೌಂದರ್ಯ ಶೆಟ್ಟಿ ವಿರುದ್ಧ ತಿರುಗಿಬಿದ್ದ ಗಾನವಿ, “ಮೊದಲು ಕನ್ನಡ ಕಲಿ, ಮುಂಬೈಗೆ ವಾಪಸ್ ಕಳಿಸ್ತೀನಿ, ಶೋಗೋಸ್ಕರ ಫೇಕ್ ರಿಲೇಶನ್‌ಶಿಪ್ ಮಾಡ್ತೀಯಾ” ಎಂದು ಚುಚ್ಚಿದ್ದಾರೆ. ಇದಕ್ಕೆ ಪ್ರತಿಯಾಗಿ ಸೌಂದರ್ಯ, “7 ವರ್ಷದಿಂದ ಬಾಯ್‌ಫ್ರೆಂಡ್ ಇದ್ದಾನೆ ಅಂತ ಹೇಳಿ ಇಲ್ಲಿ ಮಂಜನ ಜೊತೆ ಗುಳುಗುಳು ಮಾಡುತ್ತಿರುವುದನ್ನು ಹೇಳಬೇಕಾ?” ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಗಾನವಿ, “ನನ್ನ ಪರ್ಸನಲ್ ವಿಷಯಕ್ಕೆ ಬಂದರೆ ಹೊಡೆದು ಸಾಯಿಸ್ತೀನಿ” ಎಂದು ಬಹಿರಂಗ ಬೆದರಿಕೆ ಹಾಕಿದ್ದಾರೆ.

ಇನ್ನೊಂದೆಡೆ ನಾಮಿನೇಷನ್ ವೇಳೆ ಆಸಿಯಾ ಮತ್ತು ಸೌಂದರ್ಯ ನಡುವಿನ ಕಿತ್ತಾಟ ತಾರಕಕ್ಕೇರಿದೆ. ಸೌಂದರ್ಯ ಅವರನ್ನು ನಾಮಿನೇಟ್ ಮಾಡಿ ಸಗಣಿ ನೀರು ಸುರಿಯುವಾಗ ಆಸಿಯಾ ಕೈಯಲ್ಲಿದ್ದ ಬಕೆಟ್ ಸೌಂದರ್ಯ ತಲೆಗೆ ತಾಗಿದೆ. ಇದರಿಂದ ರೊಚ್ಚಿಗೆದ್ದ ಸೌಂದರ್ಯ, ಖಾಲಿ ಬಕೆಟ್ ಹಿಡಿದು “ಬಾರಿಸಿಬಿಡುತ್ತೇನೆ, ಹೊಡೆದು ಕೊಂದು ಬಿಡುತ್ತೇನೆ” ಎಂದು ಆಸಿಯಾ ಮೇಲೆ ಎರಗಿ ಹೋಗಿದ್ದಾರೆ. ಅಂತಿಮವಾಗಿ ಈ ವಾರ ಜಗದೀಶ್, ಮಂಜು, ಕಿರಣ್, ಯಶಸ್ ಹಾಗೂ ಸೌಂದರ್ಯ ನಾಮಿನೇಟ್ ಆಗಿದ್ದು, ಮನೆಯ ನಿಯಮ ಉಲ್ಲಂಘಿಸಿದವರಿಗೆ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಯಾವ ಶಿಕ್ಷೆ ನೀಡಲಿದ್ದಾರೆ ಎಂಬ ಕುತೂಹಲ ಮೂಡಿದೆ.