SK Home Ad
Home ಸುದ್ದಿ ಬುಲ್ಡೋಜರ್ ಮೇಲೆ ಬಂದ ವರ ; ಯೋಗಿ ಆದಿತ್ಯನಾಥ್ ಬಿಗ್‌ ಫ್ಯಾನ್‌

ಬುಲ್ಡೋಜರ್ ಮೇಲೆ ಬಂದ ವರ ; ಯೋಗಿ ಆದಿತ್ಯನಾಥ್ ಬಿಗ್‌ ಫ್ಯಾನ್‌

0
10

ಸಾಮಾನ್ಯವಾಗಿ ಮದುವೆ ಮೆರವಣಿಗೆಯಲ್ಲಿ ವರರು ಕುದುರೆ, ಅಲಂಕೃತ ಕಾರು ಅಥವಾ ರಥದಲ್ಲಿ ಬರುವುದನ್ನು ನೋಡಿರುತ್ತೇವೆ. ಆದರೆ ಉತ್ತರ ಪ್ರದೇಶದಲ್ಲಿ ವರನೊಬ್ಬ ಎಲ್ಲರಿಗೂ ಅಚ್ಚರಿ ಮೂಡಿಸುವ ರೀತಿಯಲ್ಲಿ ಜೆಸಿಬಿ ಬುಲ್ಡೋಜರ್ ಮೇಲೆ ಕುಳಿತು ವಧುವಿನ ಮನೆಗೆ ಆಗಮಿಸಿದ್ದಾನೆ. ಈ ವಿಭಿನ್ನ ಮದುವೆ ಮೆರವಣಿಗೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಪಯಾಗ್‌ಪುರ ಪ್ರದೇಶದ ಖುಟೇಹನಾ ಬಜಾರ್‌ನಲ್ಲಿ ಈ ಘಟನೆ ನಡೆದಿದೆ.   ಆರಂಭದಲ್ಲಿ ವರನಿಗಾಗಿ ಐಷಾರಾಮಿ ಕಾರಿನ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿದೆ. ಆದರೆ ಕಾರಿನ ಬದಲು ಜೆಸಿಬಿಯಲ್ಲೇ ಮದುವೆ ಮೆರವಣಿಗೆ ನಡೆಸಬೇಕೆಂದು ಅಬ್ದುಲ್ ಕಲಾಂ ಪಟ್ಟು ಹಿಡಿದಿದ್ದರು. ಕೊನೆಗೆ ಅವರ ಇಚ್ಛೆಯಂತೆ ಜೆಸಿಬಿ ವ್ಯವಸ್ಥೆ ಮಾಡಲಾಯಿತು.

ಕಾರಣ ಕೇಳಿದರೆ ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಆಡಳಿತದ ಮಾದರಿಗೆ ಬಿಗ್‌ ಫ್ಯಾನ್‌ ಎಂದು  ಹೇಳ್ಳಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ  ಭ್ರಷ್ಟಾಚಾರ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಆಡಳಿತ ಕ್ರಮಗಳ ಸಂಕೇತವಾಗಿ ಬುಲ್ಡೋಜರ್ ಅನ್ನು ಅವರು ಪರಿಗಣಿಸಿದ್ದಾರೆ.

ಒಟ್ಟಿನಲ್ಲಿ ಮದುವೆಯ ದಿನದ ವಿಭಿನ್ನ ಎಂಟ್ರಿ ಮೂಲಕ ಅಬ್ದುಲ್ ಕಲಾಂ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ.