SK Home Ad
Home ಸಿನಿ ಮಿಲ್ಸ್ BBK13: ‘ಕಿಚ್ಚನ ಚಪ್ಪಾಳೆ’ಗೆ ಅವಮಾನ ಮಾಡಿದ್ರಾ ಗಾನವಿ?; ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಸ್ಪರ್ಧಿ!

BBK13: ‘ಕಿಚ್ಚನ ಚಪ್ಪಾಳೆ’ಗೆ ಅವಮಾನ ಮಾಡಿದ್ರಾ ಗಾನವಿ?; ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಸ್ಪರ್ಧಿ!

0
17

BBK13: ಬಿಗ್ ಬಾಸ್ ಕನ್ನಡ ಮನೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ನೀಡುವ ‘ಕಿಚ್ಚನ ಚಪ್ಪಾಳೆ’ಗೆ ದೊಡ್ಡ ಗೌರವವಿದೆ. ಸ್ಪರ್ಧಿಗಳ ಶ್ರಮ, ಜಾಣ್ಮೆ ಮತ್ತು ಪ್ರಾಮಾಣಿಕ ಆಟಕ್ಕೆ ಮನ್ನಣೆ ನೀಡಿ ಸುದೀಪ್ ಈ ವಿಶೇಷ ಗೌರವ ನೀಡುತ್ತಾರೆ. ಇತ್ತೀಚೆಗೆ ನಡೆದ ಸವಾಲಿನ ‘ಡೈಮಂಡ್ ಕದಿಯುವ’ ಟಾಸ್ಕ್‌ನಲ್ಲಿ ತಾಂಡವ್ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ವಾರಾಂತ್ಯದಲ್ಲಿ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಆದ್ರೆ ಇದೀಗ ಸಹಸ್ಪರ್ಧಿ ಗಾನವಿ ಈ ಗೌರವವನ್ನು ಹಗುರವಾಗಿ ಪರಿಗಣಿಸಿ ವಿವಾದಕ್ಕೆ ಸಿಲುಕಿದ್ದಾರೆ.

ಮನೆಯೊಳಗೆ ನಾಮಿನೇಷನ್ ವಿಚಾರವಾಗಿ ತಾಂಡವ್ ಮತ್ತು ಗಾನವಿ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ತಾಂಡವ್ ತಮಗೆ ಸಿಕ್ಕ ಕಿಚ್ಚನ ಚಪ್ಪಾಳೆಯನ್ನು ಉಲ್ಲೇಖಿಸಿ ತಮ್ಮ ಆಟವನ್ನು ಸಮರ್ಥಿಸಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಗಾನವಿ, “ಅದು ನಿನ್ನ ಆಟಕ್ಕೆ ಸಿಕ್ಕಿದ್ದಲ್ಲ, ಫ್ಲ್ಯೂಕ್‌ನಲ್ಲಿ ಸಿಕ್ಕ ಚಪ್ಪಾಳೆ” ಎಂದು ಲಘುವಾಗಿ ಮಾತನಾಡುವ ಮೂಲಕ ತಾಂಡವ್‌ಗೆ ಸಿಕ್ಕ ಮನ್ನಣೆಯನ್ನು ತಳ್ಳಿಹಾಕಿದ್ದಾರೆ.

ಗಾನವಿಯ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳು ಹಾಗೂ ವೀಕ್ಷಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸುದೀಪ್ ಯಾರಿಗೆಂದರಲ್ಲಿ ಸುಮ್ಮನೆ ಚಪ್ಪಾಳೆ ತಟ್ಟುವುದಿಲ್ಲ, ಗಾನವಿ ಮಾತು ನೇರವಾಗಿ ಸುದೀಪ್ ನಿರ್ಧಾರಕ್ಕೆ ಮಾಡಿದ ಅವಮಾನ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಈಗಾಗಲೇ ಶನಿವಾರದ ಸಂಚಿಕೆಯಲ್ಲಿ ಸುದೀಪ್ ಮಾತನಾಡುವಾಗ ಅಡ್ಡಿಪಡಿಸಿ ಕ್ಲಾಸ್ ತೆಗೆದುಕೊಂಡಿದ್ದ ಗಾನವಿಗೆ, ಈ ವಾರಾಂತ್ಯದ ಪಂಚಾಯಿತಿಯಲ್ಲಿ ಕಿಚ್ಚ ಮತ್ತೊಮ್ಮೆ ಬಿಸಿ ಮುಟ್ಟಿಸುವುದು ಖಚಿತ ಎನ್ನಲಾಗುತ್ತಿದೆ.