SK Home Ad
Home ಸಿನಿ ಮಿಲ್ಸ್ ಬಿಗ್‌ ಬಾಸ್ ಮನೆಯಲ್ಲಿ ಹೊಸ ಅಧ್ಯಾಯ: ಮೊದಲ ಬಾರಿಗೆ ಕ್ಯಾಪ್ಟನ್ ಪಟ್ಟಕ್ಕೇರಿದ ಯಶಸ್‌ ಕೃಷ್ಣ!

ಬಿಗ್‌ ಬಾಸ್ ಮನೆಯಲ್ಲಿ ಹೊಸ ಅಧ್ಯಾಯ: ಮೊದಲ ಬಾರಿಗೆ ಕ್ಯಾಪ್ಟನ್ ಪಟ್ಟಕ್ಕೇರಿದ ಯಶಸ್‌ ಕೃಷ್ಣ!

0
10

BBK13: ‘ಬಿಗ್‌ ಬಾಸ್‌ ಕನ್ನಡ ಸೀಸನ್-13’ ರಿಯಾಲಿಟಿ ಶೋನ ೮ನೇ ವಾರವು ಅತ್ಯಂತ ಭಾವುಕ ಹಾಗೂ ರೋಚಕ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಸುಮಾರು ೫೮ ದಿನಗಳ ಬಳಿಕ ಸ್ಪರ್ಧಿಗಳಿಗೆ ಕುಟುಂಬದವರ ಸಂದೇಶ ಪಡೆಯುವ ಅವಕಾಶ ಸಿಕ್ಕಿತು. ಜಗದೀಶ್, ಗಗನ್ ರಾಮ್, ಪ್ರಶಾಂತ್, ಕಿರಣ್ ಶಾಸ್ತ್ರಿ, ಸೌಂದರ್ಯ ಶೆಟ್ಟಿ, ಧನುಷ್ ಗೌಡ, ಯಶಸ್ ಕೃಷ್ಣ ಹಾಗೂ ಗಾನವಿ ಗೌಡ ಅವರು ತಮ್ಮ ಕುಟುಂಬದ ಪತ್ರ ಪಡೆದು ಸಂಭ್ರಮಿಸಿದರೆ, ಆಸಿಯಾ ಫಿರ್ದೋಸ್, ತಾಂಡವ್ ರಾಮ್ ಮತ್ತು ಸೋನಿಕಾ ಪತ್ರ ವಂಚಿತರಾದರು.

ಪತ್ರ ಪಡೆಯದ ಈ ಮೂವರು ಸದಸ್ಯರಿಗೆ ಬಿಗ್ ಬಾಸ್ ವಿಶೇಷ ಅಧಿಕಾರವೊಂದನ್ನು ನೀಡಿದ್ದರು. ಅದರಂತೆ, ಕ್ಯಾಪ್ಟನ್ಸಿ ಓಟದಲ್ಲಿ ಯಾರಿರಬೇಕು ಎಂಬುದನ್ನು ಸೋನಿಕಾ, ತಾಂಡವ್ ಹಾಗೂ ಆಸಿಯಾ ನಿರ್ಧರಿಸಿದರು. ಇವರು ಪ್ರಶಾಂತ್, ಗಾನವಿ, ಯಶಸ್‌ ಹಾಗೂ ಧನುಷ್ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಮಾಡಿದರು. ತೀವ್ರ ಪೈಪೂಟಿ ನಡೆದ ಈ ಟಾಸ್ಕ್‌ನಲ್ಲಿ ಆರಂಭಿಕ ಹಂತದಲ್ಲಿ ಧನುಷ್ ಹಾಗೂ ಪ್ರಶಾಂತ್ ಹೊರಬಿದ್ದರು.

ಅಂತಿಮವಾಗಿ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಯಶಸ್ ಕೃಷ್ಣ ಹಾಗೂ ಗಾನವಿ ಗೌಡ ಫೈನಲ್ ತಲುಪಿದರು. ಈ ಇಬ್ಬರ ನಡುವಿನ ಕಠಿಣ ಸ್ಪರ್ಧೆಯಲ್ಲಿ ಯಶಸ್ವಿ ಗೆಲುವು ಸಾಧಿಸುವ ಮೂಲಕ ಬಿಗ್ ಬಾಸ್ ಮನೆಯ ಹೊಸ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮೊದಲ ಬಾರಿಗೆ ನಾಯಕನ ಜವಾಬ್ದಾರಿ ಹೊತ್ತಿರುವ ಯಶಸ್ ಈ ಅಧಿಕಾರವನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ. ಇದರ ಜೊತೆಗೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಸುದೀಪ್ ಅವರು ಯಾರಿಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎಂಬ ಕುತೂಹಲವೂ ವೀಕ್ಷಕರಲ್ಲಿ ಹೆಚ್ಚಾಗಿದೆ.