ಕೆ.ಎನ್.ರಾಜಣ್ಣಗೆ ರತ್ನಗಂಬಳಿ ಸ್ವಾಗತ, ಜಾರಕಿಹೊಳಿ ವಿರುದ್ಧ ಕೈ ಕ್ರಮ ಇಲ್ಲ: ಬಿ. ಶ್ರೀರಾಮುಲು ಹೇಳಿಕೆ
ಚಿತ್ರದುರ್ಗ: ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಎನ್ಡಿಎ ಮೈತ್ರಿಕೂಟದಲ್ಲಿ ರತ್ನಗಂಬಳಿ ಸ್ವಾಗತವಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಕೆ.ಎನ್. ರಾಜಣ್ಣ ದೊಡ್ಡ ಶಕ್ತಿ. ಅವರು ಜೆಡಿಎಸ್ ಅಥವಾ ಬಿಜೆಪಿ, ಎನ್ಡಿಎ ಮೈತ್ರಿಕೂಟದ ಯಾವ ಪಕ್ಷಕ್ಕೆ ಬಂದರೂ ಸ್ವಾಗತಿಸುತ್ತೇವೆ ಎಂದರು.
ಸಚಿವ ಬಾಲಕೃಷ್ಣ ಅವರು ರಾಜಣ್ಣ ವಿರುದ್ಧ ಪಕ್ಷದ್ರೋಹ ಆರೋಪ ಮಾಡಿ, ಕಾಂಗ್ರೆಸ್ನಿಂದ ಉಚ್ಛಾಟನೆಗೆ ಒತ್ತಾಯಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಕೆ.ಎನ್. ರಾಜಣ್ಣ ಇಲ್ಲದೆ ಕಾಂಗ್ರೆಸ್ ಅಷ್ಟೊಂದು ಸ್ಥಾನ ಗೆಲ್ಲಲು ಸಾಧ್ಯವಿತ್ತಾ? ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳೇ ಇಲ್ಲವಾಗಿವೆ. ಕೇವಲ ಸ್ಟಿಂಗ್ ಆಪರೇಷನ್ ಸುದ್ದಿ ಮಾಡುತ್ತಿದೆ. ಸ್ಟಿಂಗ್ ಬಳಸಿ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದ್ದಾರೆ.
ಸಿದ್ದರಾಮಯ್ಯ ರಾಹುಲ್ ಗಾಂಧಿ ಭೇಟಿಯಾಗಿ ದೂರು ನೀಡಿದ್ದಾರೆ. ಬರುವ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ಮಾಡಲ್ಲ ಎಂದಿದ್ದಾರೆ ಎಂದು ಹೇಳಿದರು. ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಎಲ್ಲೂ ಅಭಿವೃದ್ಧಿಗೆ ಹಣ ನೀಡಿಲ್ಲ. ಹಿರಿಯೂರು ಕ್ಷೇತ್ರಕ್ಕೆ 2 ಸಾವಿರ ಕೋಟಿ ಘೋಷಿಸಿರುವುದು ಕೇವಲ ಉಪಚುನಾವಣೆ ಕಾರಣಕ್ಕೆ. ಜೆಡಿಎಸ್, ಬಿಜೆಪಿ ನಾಯಕರು ಚರ್ಚಿಸಿ ಒಮ್ಮತದ ಅಭ್ಯರ್ಥಿ ಹಾಕುತ್ತೇವೆ ಎಂದರು.
ಪಕ್ಷ ವಿರೋಧಿ ಎಂದು ಕೆ.ಎನ್. ರಾಜಣ್ಣ ಸಚಿವ ಸ್ಥಾನಕ್ಕೆ ಕುತ್ತು ಬಂದಿದೆ. ಎಸ್ಐಆರ್ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ, ಆದರೆ ಸತೀಶಣ್ಣ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಆಗಿಲ್ಲ ಎಂದು ಶ್ರೀರಾಮುಲು ಕಿಡಿಕಾರಿದರು.
- ಕರ್ನಾಟಕದ ಬಸ್ ಪ್ರಯಾಣಿಕರಿಗೆ ಮತ್ತೊಂದು ಶಾಕ್: ಮಧ್ಯರಾತ್ರಿಯಿಂದಲೇ ಹೊಸ ಬಸ್ ದರ ಜಾರಿ
- ‘K.N. ರಾಜಣ್ಣ NDAಗೆ ಬಂದರೆ ರತ್ನಗಂಬಳಿ ಸ್ವಾಗತ’: ಬಿ. ಶ್ರೀರಾಮುಲು
- 2027ರಿಂದ NEET-PG ನಿಯಮ ಬದಲಾಗುತ್ತಾ? ಸುಪ್ರೀಂ ಕೋರ್ಟ್ಗೆ 12 ಸದಸ್ಯರ ಸಮಿತಿ ವರದಿ
- ಕಾಂಗ್ರೆಸ್ ಮುಖಂಡ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಅನಂತ್ ನಿಧನ
- ರಾಹುಲ್ ಗಾಂಧಿ ವಿದೇಶಿ ಏಜೆಂಟ್: ಸೋರಸ್ ಹಣದಿಂದ ದೇಶದ ವಿರುದ್ಧ ಷಡ್ಯಂತ್ರ – ಮಾಜಿ ಸಿಎಂ, ಸಂಸದ ಬೊಮ್ಮಾಯಿ ವಾಗ್ದಾಳಿ





















