ಚಿತ್ರದುರ್ಗ: ಹಿರಿಯೂರು ತಾಲೂಕಿನ ಧರ್ಮಪುರ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಸಚಿವ ಡಾ.ಎಚ್.ಸಿ.ಬಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿದರು.
ಎಂಎಲ್ಸಿ ಚುನಾವಣೆಯಲ್ಲಿ ಸ್ಟಿಂಗ್ ಆಪರೇಷನ್ ಇಂಪ್ಯಾಕ್ಟ್ ಆಗಿದೆ ಎಂಬ ಕೆ.ಎನ್. ರಾಜಣ್ಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿಕಾರಿದ ಸಚಿವ ಬಾಲಕೃಷ್ಣ, ರಾಜಣ್ಣ ಮತ್ತು ಅವರ ಮಗ ಎಂಎಲ್ಸಿ ಚುನಾವಣೆ ಮಾಡಿಲ್ಲ, ಕಾಂಗ್ರೆಸ್ಗೆ ಮತ ಹಾಕಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾವು ಕಾಂಗ್ರೆಸ್ಗೆ ಮತ ಹಾಕಿಸಿದ್ದಾಗಿ ರಾಜಣ್ಣ ಎದೆ ಮುಟ್ಟಿಕೊಂಡು ಹೇಳಲಿ. ಯಾವ ದೇಗುಲಕ್ಕೆ ಬರ್ತಾರೋ ಬರಲಿ, ನಾನು ಅಲ್ಲಿಗೆ ಬರುತ್ತೇನೆ ಎಂದು ಸವಾಲು ಹಾಕಿದರು. ಪಕ್ಷದಲ್ಲಿದ್ದುಕೊಂಡು ಪಕ್ಷದ್ರೋಹ ಮಾಡುವುದು ಸರಿಯಲ್ಲ, ಪಕ್ಷ ವಿರೋಧಿಗಳನ್ನು ಮೊದಲು ಪಕ್ಷದಿಂದ ಹೊರಹಾಕಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಸಿಎಂ ಡಿ.ಕೆ. ಶಿವಕುಮಾರ್ ಅವರ ಹಿರಿಯೂರು ಭೇಟಿ ಕುರಿತು ಮಾತನಾಡಿದ ಅವರು, ಸಿಎಂ ಭೇಟಿ ಹಿರಿಯೂರು ಉಪಚುನಾವಣೆ ಗಿಮಿಕ್ ಎಂಬುದು ಸರಿಯಲ್ಲ. ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಯೋಜನೆಗಳನ್ನು ರೂಪಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
- ಧರ್ಮಪುರದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಭಾವುಕ ಭಾಷಣ: ಹಿರಿಯೂರು ಅಭಿವೃದ್ಧಿಗೆ ₹2,200 ಕೋಟಿ ಕೊಡುಗೆ!
- ದಿವಂಗತ ಡಿ. ಸುಧಾಕರ್ರನ್ನು ಸ್ಮರಿಸಿ ಭಾವುಕರಾದ ಸಿಎಂ ಡಿ.ಕೆ. ಶಿವಕುಮಾರ್
- ‘ರಾಮಾಯಣ’ದಲ್ಲಿ ರಾವಣನ ಪಾತ್ರ: ಅಪ್ಪ ಯಶ್ಗೆ ಮಗ ಯಥರ್ವ್ ಕೇಳಿದ ಪ್ರಶ್ನೆಗೆ ರಾಕಿ ಭಾಯ್ ಉತ್ತರ?; ಇದನ್ನು ಓದಿ
- ಸ್ಕ್ರೋಲಿಂಗ್ಗೆ ಬ್ರೇಕ್ : ಗೂಗಲ್ನ ‘Dreambeans’! ಇಂದಿನಿಂದ ಕನ್ನಡದಲ್ಲೂ ಲಭ್ಯ
- ಪ್ರಯಾಣಿಕರಿಗೆ ಗುಡ್ನ್ಯೂಸ್: ನ. 13ಕ್ಕೆ ನಮ್ಮ ಮೆಟ್ರೋ ಹೊಸ ಸೇವೆ?




















