ಚಿತ್ರದುರ್ಗ: ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಬಿಜೆಪಿಯಿಂದ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಎಂಬ ಘೋಷಣೆಯಡಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನವೆಂಬರ್ 4ರಂದು ಚಿತ್ರದುರ್ಗದಲ್ಲಿ ಬೃಹತ್ ಅಭಿಯಾನ ನಡೆಯಲಿದೆ. ರಾಜ್ಯ ಉಸ್ತುವಾರಿ ಹರೀಶ್ ತ್ರಿವೇದಿ ನೇತೃತ್ವದಲ್ಲಿ ನಡೆಯಲಿರುವ ಈ ಅಭಿಯಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಸುಮಾರು 10 ಸಾವಿರ ಜನರು ರ್ಯಾಲಿಯಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಹಾಲಿನ ದರ ಹೆಚ್ಚಳದ ವಿರುದ್ಧ ಕಿಡಿಕಾರಿದ ಕಾರಜೋಳ, ರಾಜ್ಯದಲ್ಲಿ ಭೀಕರ ಬರಗಾಲವಿರುವ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ. ಸರ್ಕಾರ ರೈತರಿಗೆ 8 ರೂ. ಪ್ರೋತ್ಸಾಹ ಧನ ನೀಡಬೇಕಿತ್ತು. ಅದನ್ನು ಬಿಟ್ಟು ಜನರ ಮೇಲೆ ಹಾಲಿನ ದರ ಹೆಚ್ಚಳದ ಹೊರೆ ಹಾಕಿರುವುದು ದುರಾಡಳಿತದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರಿಗೆ ಬಸ್ ದರವನ್ನು ಶೇ. 25ರಷ್ಟು ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದೆ. ಎಲ್ಲ ಹೊರೆ, ಕೆಟ್ಟ ಕೆಲಸಗಳನ್ನು ನವೆಂಬರ್ 1ಕ್ಕೆ ಇಟ್ಟುಕೊಂಡಿದ್ದಾರೆ. ಒಂದೆಡೆ ಜನರ ಮೇಲೆ ಹೊರೆ ಹಾಕಿ, ಮತ್ತೊಂದೆಡೆ ನ.1ಕ್ಕೆ ಕಾಂಗ್ರೆಸ್ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.
SIR (Special Intensive Revision) ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಮೆಚ್ಚುಗೆ ವ್ಯಕ್ತಪಡಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಾರಜೋಳ, ಸಚಿವ ಸತೀಶ್ ಜಾರಕಿಹೊಳಿ ಅವರು ಬುದ್ಧಿವಂತರು. ಅಧ್ಯಯನ ಮಾಡಿ ಅವರು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ನನ್ನ ಧನ್ಯವಾದಗಳು ಎಂದು ಹೇಳಿದರು.
- ಫಿಲಿಪ್ಸ್ ಬಿರುಗಾಳಿಗೆ ಪುಡಿಪುಡಿಯಾದ ಬೌಲರ್ಸ್: ಆಕ್ಲೆಂಡ್ನಲ್ಲಿ ಭಾರತಕ್ಕೆ 260 ರನ್ಗಳ ಅಸಾಧ್ಯ ಗುರಿ ಕೊಟ್ಟ ಕಿವೀಸ್!
- ರೋಬೋಟ್ಗಳ ಹೊಸ ಲೋಕಕ್ಕೆ ಬೆಂಗಳೂರು ಸಜ್ಜು: ಪರದೆಯಿಂದ ನೈಜ ಜಗತ್ತಿಗೆ AI
- ಮಾಜಿ ಸಚಿವ ಶ್ರೀರಾಮುಲು ಸೋದರಳಿಯ ಸುರೇಶ್ ಬಾಬುಗೆ ಬಿಹಾರ ನ್ಯಾಯಾಲಯದಿಂದ NBW
- ವರ್ಷವಿಡೀ ಕನ್ನಡ ರಾಜ್ಯೋತ್ಸವ ಆಚರಿಸುವ ಮಠವಿದು!
- ಕಾಂಗ್ರೆಸ್ ವಿರುದ್ಧ ಕಾರಜೋಳ ವಾಗ್ದಾಳಿ : ನ.4ಕ್ಕೆ ಬಿಜೆಪಿಯಿಂದ ಪ್ರಜಾಪ್ರಭುತ್ವ ಉಳಿಸಿ ಅಭಿಯಾನ





















