SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಕುಳಗೇರಿ ಕ್ರಾಸ್: ವಿದ್ಯುತ್ ತಂತಿ ತುಂಡಾಗಿ ಬಿದ್ದು 4 ಎಕರೆ ಕಬ್ಬು ಭಸ್ಮ

ಕುಳಗೇರಿ ಕ್ರಾಸ್: ವಿದ್ಯುತ್ ತಂತಿ ತುಂಡಾಗಿ ಬಿದ್ದು 4 ಎಕರೆ ಕಬ್ಬು ಭಸ್ಮ

0
75
ತಿಮ್ಮಾಪೂರ ಎಸ್.ಎನ್ ಗ್ರಾಮದ ರೈತ ಮಹಾಂತೇಶ ಅಂಗಡಿ ಅವರಿಗೆ ಸೇರಿದ ಕಬ್ಬು ಬೆಳೆಗೆ ಹೊತ್ತಿಕೊಂಡಿರುವ ಬೆಂಕಿ ನಂದಿಸುತ್ತಿರುವುದು.

ಕಬ್ಬಿನ ಹೊಲದಲ್ಲಿ ಬೆಂಕಿ ಅವಘಡ: ರೈತನ ಬೆಳೆ ನಾಶ, ಗೂಡು ಕಳೆದುಕೊಂಡ ಹಕ್ಕಿಗಳ ದೃಶ್ಯ ಮನಕಲಕುವಂತಿತ್ತು

ಕುಳಗೇರಿ ಕ್ರಾಸ್: ತಿಮ್ಮಾಪೂರ ಎಸ್.ಎನ್ ಗ್ರಾಮದ ಮಹಾಂತೇಶ ವೀರಭದ್ರಪ್ಪ ಅಂಗಡಿ ಅವರ ಕಬ್ಬಿನ ಹೊಲದಲ್ಲಿ ಹಾದುಹೋದ ವಿದ್ಯುತ್ ಮೇನ್ ಲೈನ್ ತಂತಿ ತುಂಡಾಗಿ ಬಿದ್ದು ಸುಮಾರು ೪ಎಕರೆ ಕಬ್ಬು ಸುಟ್ಟು ಬಸ್ಮವಾದ ಘಟನೆ ಬುಧವಾರ ಮದ್ಯಾಹ್ನ ನಡೆದಿದೆ.

ನೂರಾರು ಎಕರೆ ರೈತರ ಜಮಿನುಗಳಿಗೆ ಹಾದು ಹೋಗುವ ಮುಖ್ಯ ಕಾಲುವೆ ರಸ್ತೆಗೆ ಈ ಮೇನ್ ಲೈನ್ ತಂತಿ ಅಡ್ಡಲಾಗಿ ಕತ್ತರಿಸಿ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ತಮ್ಮ ಕಣ್ಣೆದುರೇ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ರೈತ ಮಹಾಂತೇಶ ಟ್ರ್ಯಾಕ್ಟರ್ ಮೂಲಕ ರೂಟರ್ ಹೊಡೆದು ಅಲ್ಲಿದ್ದ ಯುವ ರೈತರ ಸಹಾಯದಿಂದ ಅಲ್ಪಸ್ವಲ್ಪ ಬೆಳೆ ಉಳಿಸಿಕೊಳ್ಳುವ ಶತಪ್ರಯತ್ನ ಮಾಡಿದ್ದಾರೆ. ಗಾಳಿಯ ರಬಸಕ್ಕೆ ಬೆಂಕಿ ವೇಗವಾಗಿ ಹರಡಿ ಅರ್ಧದಷ್ಟು ಕಬ್ಬು ಸುಟ್ಟು ಬಸ್ಮವಾಗಿದೆ.
ನಂತರ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ನೀರುಹಾಕಿ ಬೆಂಕಿ ನಂದಿಸಿ ಮಾಹಿತಿ ಪಡೆದು ವಾಪಾಸಾದರು. ಸ್ಥಳಕ್ಕೆ ಕಂದಾಯ ಹಾಗೂ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದರು.

ಸುಟ್ಟ ಕಬ್ಬಿಗೆ ಪರಿಹಾರ ಮರಿಚಿಕೆ: ಈ ಭಾಗದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಈವರೆಗೂ ನೂರಾರು ಎಕರೆ ಕಬ್ಬು ಸುಟ್ಟು ಬಸ್ಮವಾಗಿದೆ. ಕಬ್ಬಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ರೈತರ ಹೊಲಕ್ಕೆ ಎಲ್ಲ ಅಧಿಕಾರಿಗಳು ದಾವಿಸುತ್ತಾರೆ. ಭಾವಿಚಿತ್ರ ಸಮೇತ ಮಾಹಿತಿ ಪಡೆದು ಎಲ್ಲ ಧಾಖಲಾತಿ ಪಡೆಯುತ್ತಾರೆ. ಸಾಕಷ್ಟು ಖರ್ಚು ಮಾಡಿಸಿ ರೈತರನ್ನ ಕಚೇರಿಗಳಿಗೆ ಅಲೆದಾಡಿಸುತ್ತಾರೆ. ಆದರೆ ಈ ವರೆಗೂ ಕಬ್ಬು ಸುಟ್ಟ ಒಬ್ಬ ರೈತನಿಗೂ ಸರ್ಕಾರದಿಂದ ಪರಿಹಾರ ಬಂದಿಲ್ಲ ಎಂಬುದು ರೈತರ ಆರೋಪ.

ಯಾರುಹೊನೆ: ಲಕ್ಷಾಂತರ ಖರ್ಚುಮಾಡಿ ಕಬ್ಬು ಬೆಳೆ ಬೆಳೆದಿದ್ದೆವೆ. ನಾವು ನಿತ್ಯ ಜಮಿನಿನಲ್ಲಿ ದುಡಿದರೆ ಮಾತ್ರ ನಮ್ಮ ಹೆಂಡಿರ ಮಕ್ಕಳ ಹೊಟ್ಟೆ ತುಂಬೋದು. ನಾವು ಹೇಳಿಕೊಳ್ಳುವಷ್ಟು ದೊಡ್ಡ ರೈತರಲ್ಲ. ಅಗ್ನಿ ಅವಘಡಗಳಿಂದ ನಿತ್ಯ ನೂರಾರು ಎಕರೆ ಕಬ್ಬು ಸುಟ್ಟು ಬಸ್ಮವಾಗುತ್ತಿವೆ. ಸುಟ್ಟ ಕಬ್ಬು ಎಲ್ಲಿಗೆ ಕಳಿಸಬೇಕು, ನಮಗಾದ ನಷ್ಟ ಯಾರು ಕೊಡುತ್ತಾರೆ. ಇದಕ್ಕೆಲ್ಲ ಯಾರು ಹೊನೆ ಎಂದು ರೈತರು ಅಲವತ್ತುಕೊಂಡರು.

ಬಾಕ್ಸ್: ನಿತ್ಯ ವಿದ್ಯುತ್ ಶಾರ್ಟ್ ನಿಂದ ಒಂದಿಲ್ಲೊಂದು ರೈತರ ಕಬ್ಬು ಸುಟ್ಟು ಬಸ್ಮವಾಗುತ್ತಿವೆ. ಮೇನ್ ಲೈನ್ ಹರಿದು ಬಿದ್ದು ನನ್ನ ಕಬ್ಬು ಸುಟ್ಟು ಬಸ್ಮವಾಗಿದೆ. ನಿತ್ಯ ಈ ಪ್ರಕರಣಗಳು ಹೆಚ್ಚುತ್ತಿವೆ ಸಂಬಂದಿಸಿದ ಆಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಅಧಿಕಾರಿಗಳ ಉಧಾಸೀನ ಯಾಕೆ ಎಂದು ಪ್ರಶ್ನಿಸಿದ ರೈತರು ಅಧಿಖಾರಿಗಳ ಈ ಉದ್ದಟತನಕ್ಕೆ ಕೊನೆ ಇಲ್ಲವೇ? ಇನ್ನೂ ಎಷ್ಟು ರೈತರು ನಷ್ಟ ಅನುಭವಿಸಬೇಕು ಹೇಳಿ? ಇಂತ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು. ರೈತ ಮಹಾಂತೇಶ ಅಂಗಡಿ ಅಧಿಕಾರಿಗಳ ವಿರುದ್ದ ಹರಿಹಾಯ್ದರು.

ಸುಟ್ಟ ಕಬ್ಬು ಏನು ಮಾಡಬೇಕು ಎಂಬ ಚಿಂತೆಯಲ್ಲಿದ್ದೆವೆ. ಕಾರ್ಖಾನೆಗಳು ಪ್ರಾರಂಭವಾದರೆ ಚಿಕ್ಕಪುಟ್ಟ ರೈತರು ಬದುಕುತ್ತಾರೆ. ಹೋರಾಟ ಮಾಡುವುದಕ್ಕಿಂತ ಮೂರು ವರ್ಷ ಕಬ್ಬು ಬೆಳೆಯುವುದನ್ನೇ ಸಂಪೂರ್ಣ ನಿಲ್ಲಿಸಬೇಕು. ಬೇರೆಬೇರೆ ಬೆಳೆ ಬೆಳೆಯುವ ಮೂಲಕ ಸರ್ಕಾರ ಮತ್ತು ಕಾರ್ಖಾನೆಗಳಿಗೆ ತಕ್ಕ ಉತ್ತರ ಕೊಡಬೇಕು. ಹೋರಾಟದಲ್ಲೇ ಕಾಲ ಕಳೆದರೆ ಚಿಕ್ಕ ರೈತರಿಗೆ ಬಾರಿ ತೊಂದರೆಯಾಗುತ್ತದೆ. ಯುವರೈತ ಮಹಾಂತೇಶ ಪೂಜಾರ ಜೆಡಿಎಸ್ ಯುವ ಘಟಕ ತಾಲುಕಾಧ್ಯಕ್ಷ.

ಹಕ್ಕಿಗಳ ರೋಧನೆ: ಇತ್ತ ಕಬ್ಬಿನ ಗದ್ದೆಯಲ್ಲಿ ಮನೆ ಮಾಡಿದ್ದ ಹಕ್ಕಿ-ಕಕ್ಷಿಗಳು ಬೆಂಕಿ ಹೊತ್ತುತ್ತಿದ್ದಂತೆ ತನ್ನ ಮರಿಗಳನ್ನ ಗೂಡಲ್ಲೇ ಬಿಟ್ಟು ಚಿಲಿ/ಪಿಲಿ ಹಾರಾಡತೊಡಗಿದವು. ಬೆಂಕಿ ನಂದಿದ ನಂತರ ಗೂಡು ಸುಟ್ಟು ಬಸ್ಮವಾಗಿರುವುದನ್ನ ಕಂಡು ರೋಧಿಸುತ್ತಿರುವ ಹಕ್ಕಿಗಳ ಚಿಲಿಪಿಲಿ ನಾದ ಹೃದಯ ಕಲಕುವಂತಿತ್ತು.