SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ನಾಗಭೂಷಣ ಹೆಗಡೆ ನಿಧನ

ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ನಾಗಭೂಷಣ ಹೆಗಡೆ ನಿಧನ

0
2

ಯಲ್ಲಾಪುರ: ಜಿಲ್ಲೆಯ ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ನಾಗಭೂಷಣ ಹೆಗಡೆ ಬಾಳೆಹದ್ದ (58) ಅ. 14ರಂದು ವಿಧಿವಶರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಶಿರಸಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ನಾಡಿನ ಶ್ರೇಷ್ಠ ಗಾಯಕ ಪಂ. ಗಣಪತಿ ಭಟ್ಟರ ಸಾಧಕ ಶಿಷ್ಯರಲ್ಲೊಬ್ಬರಾದ ಅವರು ಪತ್ನಿ, ಇಬ್ಬರು ಪುತ್ರರು, ಅಪಾರ ಕಲಾಭಿಮಾನಿಗಳು ಹಾಗೂ ಬಂಧು-ಬಳಗವನ್ನು ಅಗಲಿದ್ದಾರೆ.

ಪ್ರಸ್ತುತ ಅವರು ಮಂಚಿಕೇರಿಯ ರಾಜರಾಜೇಶ್ವರಿ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ದಶಕಗಳ ಕಾಲ ನಾದೋಪಾಸನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ತಮ್ಮ ಅದ್ಭುತ ಗಾಯನ ಮಾತ್ರವಲ್ಲದೆ, ನೂರಾರು ಶಿಷ್ಯರಿಗೆ ಸಂಗೀತ ಧಾರೆ ಎರೆದು ವಿದ್ಯಾದಾನ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.