SK Home Ad
Home ಸುದ್ದಿ ರಾಜ್ಯ ಕುವೆಂಪು ವಿವಿಯಲ್ಲಿ ಕೆಪಿಎಸ್‌ಸಿ ಮಾದರಿಯ ಹಗರಣ

ಕುವೆಂಪು ವಿವಿಯಲ್ಲಿ ಕೆಪಿಎಸ್‌ಸಿ ಮಾದರಿಯ ಹಗರಣ

0
73

ಶಿವಮೊಗ್ಗ: ಕುವೆಂಪು ವಿವಿ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆ ಹಾಗೂ ಅಂಕಪಟ್ಟಿ ಅಕ್ರಮದ ಆರೋಪಗಳು ಕೆಪಿಎಸ್‌ಸಿ ಮಾದರಿಯ ಹಗರಣದ ಸ್ವರೂಪ ಪಡೆದುಕೊಂಡಿದ್ದು, ಈ ಬಗ್ಗೆ ಸಮಗ್ರ ಸಿಐಡಿ ತನಿಖೆ ನಡೆಸಬೇಕು. ಇಲ್ಲದಿದ್ದರೆ ಸಮಸ್ಯೆ ಮತ್ತಷ್ಟು ದೊಡ್ಡದಾಗುವ ಸಾಧ್ಯತೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ತಿಂಗಳ ಹಿಂದೆ ಡಿಜಿಟಲ್ ಮೌಲ್ಯಮಾಪನದ ಸಾಧಕ-ಬಾಧಕಗಳ ಕುರಿತು ಮಾಹಿತಿ ಕೋರಿ ಕುಲಸಚಿವರಿಗೆ ಪತ್ರ ಬರೆದಿದ್ದರೂ ಇದುವರೆಗೂ ಯಾವುದೇ ಉತ್ತರ ಬಂದಿಲ್ಲ ಎಂದರು.

ಈ ಹಿಂದೆ ಕುಲಸಚಿವರಾಗಿದ್ದ ಹೇಮಂತ್ ಎನ್. ಅವರು ಸಮಿತಿ ರಚನೆ ಮಾಡಿದ್ದರು. ಇದೀಗ ಮೂವರು ಸಮಿತಿ ಸದಸ್ಯರ ವರದಿ ಬಹಿರಂಗವಾಗಿದ್ದು ಅದರಲ್ಲೂ ಡಿಜಿಟಲ್ ಮೌಲ್ಯಮಾಪನದ ನ್ಯೂನತೆಗಳು ಬೆಳಕಿಗೆ ಬಂದಿವೆ ಎಂದರು.

ಡಿಜಿಟಲ್ ಮೌಲ್ಯಮಾಪನಕ್ಕೆ ಕಂಪ್ಯೂಟರ್ ಕೊಟ್ಟಿಲ್ಲ, ಸಿಸಿ ಟಿವಿಯೂ ಇಲ್ಲ, ಪತ್ರಿಕೆಗಳಿಗೆ ಡಿಜಿಟಲ್ ಕೋಡ್ ಇಲ್ಲ, ಅಂಕಗಳನ್ನು ಮ್ಯಾನುವಲ್ ಮೂಲಕ ಎಂಟ್ರಿ ಮಾಡುತ್ತಿದ್ದಾರೆ. ಕೋತಾ ಬಜೆಟ್ ಮಂಡಿಸಿರುವ ವಿವಿಯಲ್ಲಿ ಡಿಜಿಟಲ್ ಮೌಲ್ಯಮಾಪನಕ್ಕೆ ದುಂದುವೆಚ್ಚ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.

ಸಮಿತಿ ವರದಿ ಪ್ರಕಾರ, ಒಂದೇ ವರ್ಷಕ್ಕೆ ಖಾಸಗಿ ಕಂಪನಿಗೆ 2.94 ಕೋಟಿ ಹೆಚ್ಚುವರಿ ಹಣ ನೀಡಲಾಗಿದೆ. ಡಿಜಿಟಲ್ ಮೌಲ್ಯಮಾಪನಕ್ಕೆ ಸುಮಾರು 8 ಕೋಟಿ ವೆಚ್ಚ ಮಾಡಲಾಗಿದೆ. ವಿಶ್ವವಿದ್ಯಾಲಯದ ಪರೀಕ್ಷಾ ಶುಲ್ಕದ ವೆಚ್ಚದಲ್ಲಿ ಉಳಿತಾಯವಾಗುತ್ತಿದ್ದು, ಈಗ ಡಿಜಿಟಲ್ ಮೌಲ್ಯಮಾಪನದಿಂದ ವೆಚ್ಚ ಹೆಚ್ಚಳವಾಗಿದೆ. ಕುವೆಂಪು ವಿವಿಯ ಪ್ರಾಧ್ಯಾಪಕರು ನೀಡಿರುವ ವರದಿಯಲ್ಲಿ ಇದು ಬಹಿರಂಗವಾಗಿದೆ ಎಂದರು.