SK Home Ad
Home ಕ್ರೀಡೆ ವಿಂಡೀಸ್ ವಿರುದ್ಧ ಏಕದಿನ ಕದನ: ತಿರುವನಂತಪುರಕ್ಕೆ ಟೀಂ ಇಂಡಿಯಾ

ವಿಂಡೀಸ್ ವಿರುದ್ಧ ಏಕದಿನ ಕದನ: ತಿರುವನಂತಪುರಕ್ಕೆ ಟೀಂ ಇಂಡಿಯಾ

0
2

ತಿರುವನಂತಪುರ: ಸೆಪ್ಟೆಂಬರ್ 28ರಿಂದ ಆರಂಭವಾಗಲಿರುವ ವೆಸ್ಟ್ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳಲು ಶುಭ್‌ಮನ್ ಗಿಲ್ ನೇತೃತ್ವದ ಭಾರತೀಯ ಕ್ರಿಕೆಟ್ ತಂಡವು ಸೆಪ್ಟೆಂಬರ್ 24ರ ವೇಳೆಗೆ ತಿರುವನಂತಪುರ ತಲುಪಲಿದೆ.

ಗ್ರೀನ್‌ಫೀಲ್ಡ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ ಕಣಕ್ಕಿಳಿಯಲಿದೆ. ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರ ಪುನರಾಗಮನವು ತಂಡಕ್ಕೆ ಬಲ ತುಂಬಿದೆ.

ಕೆ.ಎಲ್. ರಾಹುಲ್ ಉಪನಾಯಕನಾಗಿ ಜವಾಬ್ದಾರಿ ಹೊರಲಿದ್ದು, ಯಶಸ್ವಿ ಜೈಸ್ವಾಲ್, ಕುಲದೀಪ್ ಯಾದವ್ ಹಾಗೂ ಮೊಹಮ್ಮದ್ ಸಿರಾಜ್ ಸೇರಿದಂತೆ ಯುವ ಮತ್ತು ಅನುಭವಿ ಆಟಗಾರರು ತಂಡದಲ್ಲಿದ್ದಾರೆ.