ಅಂತಿಮ ದರ್ಶನಕ್ಕೆ ಬಂದವರಿಗೆ ಶಾಕ್; ‘ಸತ್ತಿದ್ದ’ ಮಹಿಳೆ ಮತ್ತೆ ಕಣ್ಣು ತೆರೆದಳು!
ಹಾವೇರಿ: ಸತ್ತಿದ್ದಾಳೆಂದು ಭಾವಿಸಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಮಹಿಳೆಯೊಬ್ಬಳು ಜೀವಂತವಾಗಿರುವುದು ಗೊತ್ತಾಗಿ ಕುಟುಂಬಸ್ಥರು ಅಚ್ಚರಿಗೊಳಗಾದ ಘಟನೆ ಹಿರೇಕೆರೂರ ತಾಲೂಕಿನ ಗೊಡಚಿಕೊಂಡ ಗ್ರಾಮದಲ್ಲಿ ನಡೆದಿದೆ. ವೈದ್ಯರ ಸಮಯಪ್ರಜ್ಞೆಯಿಂದ ರೇಣುಕಮ್ಮ ಸಂಕೊಳ್ಳಿ (63) ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೇಣುಕಮ್ಮ ಸೋಮವಾರ ರಾತ್ರಿ ತೀವ್ರ ಅಸ್ವಸ್ಥರಾಗಿದ್ದರು. ರಕ್ತದೊತ್ತಡ ಹಾಗೂ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ತೀವ್ರ ಏರುಪೇರಾಗಿದ್ದರಿಂದ ಪ್ರಜ್ಞಾಹೀನರಾಗಿದ್ದರು. ಕುಟುಂಬಸ್ಥರು ಅವರನ್ನು ಗ್ರಾಮದ ಸ್ಥಳೀಯ ವೈದ್ಯರ ಬಳಿ ಕರೆದೊಯ್ದಿದ್ದರು. ಈ ವೇಳೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಉಸಿರಾಟವೂ ಕ್ಷೀಣಿಸಿತ್ತು. ರೇಣುಕಮ್ಮ … Continue reading ಅಂತಿಮ ದರ್ಶನಕ್ಕೆ ಬಂದವರಿಗೆ ಶಾಕ್; ‘ಸತ್ತಿದ್ದ’ ಮಹಿಳೆ ಮತ್ತೆ ಕಣ್ಣು ತೆರೆದಳು!
Copy and paste this URL into your WordPress site to embed
Copy and paste this code into your site to embed