SK Home Ad
Home ಸಿನಿ ಮಿಲ್ಸ್ ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್‌ನಲ್ಲಿ ರಶ್ಮಿಕಾ ಮಂದಣ್ಣ: ಐತಿಹಾಸಿಕ ಪಾತ್ರಕ್ಕೆ ‘ನ್ಯಾಷನಲ್ ಕ್ರಶ್’ ಆಯ್ಕೆ!

ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್‌ನಲ್ಲಿ ರಶ್ಮಿಕಾ ಮಂದಣ್ಣ: ಐತಿಹಾಸಿಕ ಪಾತ್ರಕ್ಕೆ ‘ನ್ಯಾಷನಲ್ ಕ್ರಶ್’ ಆಯ್ಕೆ!

0
22

ಬೆಂಗಳೂರು: ಕರ್ನಾಟಕ ಶಾಸ್ತ್ರೀಯ ಸಂಗೀತದ ದಂತಕಥೆ ಹಾಗೂ ‘ಭಾರತರತ್ನ’ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಪ್ಯಾನ್ ಇಂಡಿಯಾ ಬಯೋಪಿಕ್ ಚಿತ್ರಕ್ಕೆ ಕೊನೆಗೂ ನಾಯಕಿ ಅಂತಿಮಗೊಂಡಿದ್ದಾರೆ. ಈ ಮಹತ್ವದ ಹಾಗೂ ಐತಿಹಾಸಿಕ ಪಾತ್ರದಲ್ಲಿ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವುದು ಅಧಿಕೃತವಾಗಿ ಖಚಿತವಾಗಿದೆ.

ಈ ಐತಿಹಾಸಿಕ ಪಾತ್ರಕ್ಕಾಗಿ ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಹಾಗೂ ಮೃಣಾಲ್ ಠಾಕೂರ್ ಸೇರಿದಂತೆ ಹಲವು ಮುಂಚೂಣಿ ನಟಿಯರ ಲುಕ್ ಟೆಸ್ಟ್ ನಡೆಸಲಾಗಿತ್ತು. ಆದ್ರೆ, ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ರಶ್ಮಿಕಾ ಮಂದಣ್ಣ, ತಾವೇ ಈ ಪಾತ್ರ ನಿರ್ವಹಿಸುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜನ್ಮದಿನೋತ್ಸವದ ವಿಶೇಷ ಸಂದರ್ಭದಲ್ಲಿ ಈ ಬಹುನಿರೀಕ್ಷಿತ ಸಿನಿಮಾವನ್ನು ಪ್ರಕಟಿಸಲಾಗಿದೆ. ‘ಜೆರ್ಸಿ’ ಖ್ಯಾತಿಯ ಪ್ರತಿಭಾವಂತ ನಿರ್ದೇಶಕ ಗೌತಮ್ ತಿನ್ನನೂರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಹಾಗೇ ಈ ಅಧಿಕೃತ ಪ್ರಕಟಣೆ ಹೊರಬಿದ್ದ ತಕ್ಷಣವೇ ರಶ್ಮಿಕಾ ಮಂದಣ್ಣ ಅವರು ಸುಬ್ಬುಲಕ್ಷ್ಮಿ ಅವರ ರೂಪದಲ್ಲಿರುವ ತಮ್ಮ ವಿಶೇಷ ಲುಕ್ ಪೋಸ್ಟರ್‌ನ್ನು ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಒಟ್ಟಾರೆ.. ‘ಪುಷ್ಪ’, ‘ಅನಿಮಲ್’ ಮತ್ತು ‘ಮೈಸಾ’ ಚಿತ್ರಗಳಲ್ಲಿ ವಿಭಿನ್ನ ಹಾಗೂ ಸವಾಲಿನ ಪಾತ್ರಗಳ ಮೂಲಕ ಗಮನ ಸೆಳೆದಿರುವ ರಶ್ಮಿಕಾ, ಇದೀಗ ಸಂಗೀತ ದಿಗ್ಗಜೆ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ವ್ಯಕ್ತಿತ್ವ ಹಾಗೂ ಅಪಾರ ಸಂಗೀತ ಸಾಧನೆಯನ್ನು ಬೆಳ್ಳಿಪರದೆಯ ಮೇಲೆ ಹೇಗೆ ಕಟ್ಟಿಕೊಡಲಿದ್ದಾರೆ ಎಂಬ ತೀವ್ರ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.