SK Home Ad
Home ಸುದ್ದಿ ಪ್ರಯಾಣಿಕರ ಗಮನಕ್ಕೆ: ವಿಶೇಷ ರೈಲುಗಳ ಅವಧಿ ವಿಸ್ತರಣೆ

ಪ್ರಯಾಣಿಕರ ಗಮನಕ್ಕೆ: ವಿಶೇಷ ರೈಲುಗಳ ಅವಧಿ ವಿಸ್ತರಣೆ

0
62

ಹುಬ್ಬಳ್ಳಿ: ದಸರಾ, ದೀಪಾವಳಿ ಮತ್ತು ಛತ್ ಹಬ್ಬಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು 8 ಸಾಪ್ತಾಹಿಕ ವಿಶೇಷ ರೈಲುಗಳ ಸಂಚಾರ ಅವಧಿಯನ್ನು ನೈಋತ್ಯ ರೈಲ್ವೆ ವಿಸ್ತರಿಸಿದೆ.

ಈ ಪ್ರಕಾರ ಎಸ್ಎಸ್ಎಸ್ ಹುಬ್ಬಳ್ಳಿ-ಕೊಲ್ಲಂ ವಿಶೇಷ ರೈಲು (07313) ಅಕ್ಟೋಬರ್ 4 ರಿಂದ ನವೆಂಬರ್ 29 ರವರೆಗೆ ಮತ್ತು ಕೊಲ್ಲಂ-ಹುಬ್ಬಳ್ಳಿ ರೈಲು (07314) ಅಕ್ಟೋಬರ್ 5 ರಿಂದ ನವೆಂಬರ್ 30 ರವರೆಗೆ ಸಂಚರಿಸಲಿದೆ.

ಅದೇ ರೀತಿ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ತಿರುವನಂತಪುರಂ ನಾರ್ತ್ ನಡುವಿನ ರೈಲುಗಳು (06523) ಅಕ್ಟೋಬರ್ 5 ರಿಂದ ನವೆಂಬರ್ 30, (06547) ಸೆಪ್ಟೆಂಬರ್ 30 ರಿಂದ ನವೆಂಬರ್ 25 ಮತ್ತು (06555) ಅಕ್ಟೋಬರ್ 2 ರಿಂದ ನವೆಂಬರ್ 27 ರವರೆಗೆ ಸಂಚರಿಸಲಿವೆ.

ವಾಪಸ್ ಮಾರ್ಗದಲ್ಲಿ ತಿರುವನಂತಪುರಂ ನಾರ್ತ್-ಬೆಂಗಳೂರು ರೈಲುಗಳು (06524) ಅಕ್ಟೋಬರ್ 6 ರಿಂದ ಡಿಸೆಂಬರ್ 1, (06548) ಅಕ್ಟೋಬರ್ 1 ರಿಂದ ನವೆಂಬರ್ 26 ಮತ್ತು (06556) ಅಕ್ಟೋಬರ್ 4 ರಿಂದ ನವೆಂಬರ್ 29 ರವರೆಗೆ ಸೇವೆ ನೀಡಲಿವೆ.

ವಿಸ್ತರಿತ ಅವಧಿಯಲ್ಲಿ ಈ ಎಲ್ಲ ರೈಲುಗಳು ತಲಾ 9 ಟ್ರಿಪ್ ಸಂಚರಿಸಲಿದ್ದು, ಸಮಯ ಮತ್ತು ನಿಲ್ದಾಣಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.