SK Home Ad
Home ಸುದ್ದಿ Samyukta Karnataka News Live: ಬೆಳ್ಳಂಬೆಳಗ್ಗೆ ಸಚಿವ ಸತೀಶ್​ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ

Samyukta Karnataka News Live: ಬೆಳ್ಳಂಬೆಳಗ್ಗೆ ಸಚಿವ ಸತೀಶ್​ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ

0
93
File Photo

AI ಸುರಕ್ಷತೆ ಬಗ್ಗೆ ಹೆಚ್ಚಿದ ಆತಂಕ – Anthropic ಸಂಶೋಧಕ ರಾಜೀನಾಮೆ : ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ GPT-6 Astra ಸೇರಿದಂತೆ ಅತ್ಯಾಧುನಿಕ AI ಮಾದರಿಗಳ ಸಾಮರ್ಥ್ಯ ವೇಗವಾಗಿ ಹೆಚ್ಚುತ್ತಿರುವ ಬೆನ್ನಲ್ಲೇ, ಅವುಗಳ ಸುರಕ್ಷತೆ, ಮೇಲ್ವಿಚಾರಣೆ ಮತ್ತು ಮಾನವ ನಿಯಂತ್ರಣದ ಕುರಿತು ಚರ್ಚೆ ಮತ್ತಷ್ಟು ತೀವ್ರಗೊಂಡಿದೆ. ಇದೇ ಸಂದರ್ಭದಲ್ಲಿ Anthropicನ ಸಂಶೋಧಕ ಜೇಕಬ್ ಕಾಕ್ಸನ್ ರಾಜೀನಾಮೆ ನೀಡಿರುವುದು ಗಮನ ಸೆಳೆದಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

‘ನನ್ನನ್ನು ಭಗೋಡ ಎಂದು ಏಕೆ ಕರೆಯುತ್ತೀರಿ?’ – ವಿಜಯ್ ಮಲ್ಯ ಪ್ರಶ್ನೆ : ವಿಜಯ್ ಮಲ್ಯ ಅವರು 1992ರಿಂದ ಯುಕೆ ಖಾಯಂ ನಿವಾಸಿಯಾಗಿದ್ದು, ಕಾನೂನು ನಿರ್ಬಂಧದಿಂದ ಯುಕೆ ತೊರೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ‘ಭಗೋಡ’ ʼವಂಚಕʼ ಎನ್ನುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ವಾಸ್ಕೋ-ಕುಲೆಂ ಮಾರ್ಗದ ಎರಡು DEMU ರೈಲುಗಳು ತಾತ್ಕಾಲಿಕ ರದ್ದು : ವಾಸ್ಕೋ ಡ ಗಾಮಾ – ಕುಲೆಂ ವಿಭಾಗದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಎರಡು ಪ್ರಯಾಣಿಕ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಳ್ಳಂಬೆಳಗ್ಗೆ ಸಚಿವ ಸತೀಶ್​ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ: ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದ ಮೇಲೆಯೇ ಬೆಳ್ಳಂಬೆಳಗ್ಗೆ ದಿಢೀರ್ ದಾಳಿ ನಡೆಸಿ ಮತ್ತೊಂದು ಬಿಗ್ ಶಾಕ್ ನೀಡಿದ್ದಾರೆ. ಈ ಹಿಂದೆಯೂ ಸತೀಶ್ ಸಹೋದರಿ ಪತಿಯಾದ ಮಂಜುನಾಥ್ ಅವರ (ಭಾಮೈದ) ಮನೆ ಮೇಲೆ ಬೆಂಗಳೂರು, ಬೆಳಗಾವಿಯಲ್ಲಿ ದಾಳಿ ಮಾಡಿ 13 ಕೋಟಿ ರೂ ಅಧಿಕ ಮೌಲ್ಯದ ನಗದು, ಚಿನ್ನಾಭರಣ ವಶಪಡಿಸಿಕೊಂಡಿದ್ದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

(ಮಾಹಿತಿ ಅಪ್​ಡೇಟ್ ಆಗಲಿದೆ)

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.