SK Home Ad
Home ಸುದ್ದಿ ರಾಜ್ಯ ಅನುದಾನಕ್ಕಾಗಿ ರಕ್ತವನ್ನೇ ಮಸಿಯಾಗಿ ಬಳಸಿದ ಶಿಕ್ಷಕ; ನ. 1ಕ್ಕೆ ಶಿಕ್ಷಕರಿಂದ ಮತ್ತೊಂದು ಎಚ್ಚರಿಕೆ

ಅನುದಾನಕ್ಕಾಗಿ ರಕ್ತವನ್ನೇ ಮಸಿಯಾಗಿ ಬಳಸಿದ ಶಿಕ್ಷಕ; ನ. 1ಕ್ಕೆ ಶಿಕ್ಷಕರಿಂದ ಮತ್ತೊಂದು ಎಚ್ಚರಿಕೆ

0
37

ಶಿವಮೊಗ್ಗ: ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಕೊಡಿ ಎಂದು ಬೇಡಿಕೊಳ್ಳುತ್ತಿದ್ದರೂ ಸರ್ಕಾರ ಅನುದಾನ ನೀಡುತ್ತಿಲ್ಲ. ಇದರಿಂದ ಬೇಸತ್ತ ಶಿಕ್ಷಕರೊಬ್ಬರು 1995ರ ನಂತರದ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಶಿಕ್ಷಕ ಪ್ರಶಾಂತ್ ಪತ್ರ ಬರೆದವರು. ಈ ಮೂಲಕ ಕನ್ನಡ ಶಾಲೆಗಳಿಗೆ ಅನುದಾನ ನೀಡುವಂತೆ ಶಿಕ್ಷಣ ಇಲಾಖೆ ಮತ್ತು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 1995ರ ನಂತರ ಆರಂಭವಾಗಿರುವ ಕನ್ನಡ ಮಾಧ್ಯಮ ಶಾಲೆಗಳಿಗೆ ರಾಜ್ಯ ಸರ್ಕಾರ ಅನುದಾನ ನಿಲ್ಲಿಸಿದೆ. ಈ ಕುರಿತು ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕರು ಬೆಂಗಳೂರಿನಲ್ಲಿ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಆ ಸಂದರ್ಭ ಕನ್ನಡ ಶಾಲೆಗಳಿಗೆ ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.

ನನ್ನ ರಕ್ತದಲ್ಲೇ ಕನ್ನಡವಿದೆ ಎಂದು ಸಚಿವ ಮಧು ಬಂಗಾರಪ್ಪ ಈ ಹಿಂದ ಹೇಳಿದ್ದರು. ಇದೇ ಕಾರಣಕ್ಕೆ ಅವರಿಗೆ ರಕ್ತದಲ್ಲಿ ಪತ್ರ ಬರೆಯುತ್ತಿದ್ದೇನೆ. ಸದ್ಯದ ಸ್ಥಿತಿಯಲ್ಲಿ ಅನುದಾನವಿಲ್ಲದೆ ಕನ್ನಡ ಶಾಲೆಗಳಿಗೆ ರಕ್ತವೆ ಇಲ್ಲದಂತಾಗಿದೆ. ಮೊದಲು ತಾನು ಸ್ವತಃ ತನ್ನ ರಕ್ತದಿಂದ ಪತ್ರ ಬರೆಯುತ್ತಿರುವುದಾಗಿ ತಿಳಿಸಿರುವ ಶಿಕ್ಷಕ ಪ್ರಶಾಂತ್, ಬೇಡಿಕೆ ಈಡೇರದಿದ್ದರೆ ನ. 1ರಂದು ಕನ್ನಡ ಶಾಲೆಗಳ ಉಳಿದ ಶಿಕ್ಷಕರು ಸಹ ತಮ್ಮ ರಕ್ತದಿಂದಲೇ ಪತ್ರ ಬರೆಯಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.