SK Home Ad
Home ನಮ್ಮ ಜಿಲ್ಲೆ ಕೊಪ್ಪಳ ಕೊಪ್ಪಳ ಬಳಿ ಬೈಕ್ ಅಪಘಾತ, ನರಗುಂದದ ಮೂವರು ಸಾವು

ಕೊಪ್ಪಳ ಬಳಿ ಬೈಕ್ ಅಪಘಾತ, ನರಗುಂದದ ಮೂವರು ಸಾವು

0
108

ಕೊಪ್ಪಳ: ನಿಂತಿದ್ದ ಗೂಡ್ಸ್ ವಾಹನಕ್ಕೆ ಬೈಕ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಬನ್ನಿಕೊಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಮೃತರನ್ನು ನರಗುಂದದ ಮಾಬೂಸಾಬ್ ಬುಡನ್ ಸಾಬ್ ಮಟಗೇರಿ (17), ಫಕ್ರಸಾಬ್ ಹಸಸಾಬ್‌ಮಾರನಬಸರಿ (19), ಶಾನುಸಾಬ್ ಮಕ್ತುಮ್ ಬಾಷ ಬಾಸಪುರ (15) ಎಂದು ಗುರುತಿಸಲಾಗಿದೆ.

ನರಗುಂದದಲ್ಲಿ ಈದ್ ಮಿಲಾದ್ ಹಬ್ಬದ ಡಿಜೆ ಮೆರವಣಿಗೆ ನಿಷೇಧಿಸಲಾಗಿತ್ತು. ಹಾಗಾಗಿ ಡಿಜೆ ಮೆರವಣಿಗೆ ನೋಡಲು ಈ ಮೂವರು ಬೈಕ್‌ನಲ್ಲಿ ಕೊಪ್ಪಳಕ್ಕೆ ಹೊರಟಿದ್ದರು.
ಮಾಹಿತಿ ತಿಳಿಯುತ್ತಿದ್ದಂತೆ ಕುಕನೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಿದರು.