ಸಿಂದಗಿ: ನಗರದ ಹಳೆಯ ಬಜಾರದ್ ಕುಲಕರ್ಣಿ ಬಟ್ಟೆ ಅಂಗಡಿ ಸಮೀಪ ನಿಲ್ಲಿಸಲಾಗಿದ್ದ ರೆನಾಲ್ಟ್ ಡಸ್ಟರ್ (KA-28-MB-3765) ಕಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟುಹೋಗಿರುವ ಘಟನೆ ನಡೆದಿದೆ.
ದೇವರ ಹಿಪ್ಪರಗಿ ತಾಲೂಕಿನ ಮಾರ್ಕಪನಹಳ್ಳಿ ಗ್ರಾಮದ ಆನಂದ ಬಸವರಾಜ ಇಜೇರಿ (32) ಅವರಿಗೆ ಸೇರಿದ ಕಾರನ್ನು ಸಾರವಾಡ ಗ್ರಾಮದ ನಿವಾಸಿ, ಚಾಲಕ ಚಂದ್ರಕಾಂತ ಮಹಾಲಿಂಗಪ್ಪ ವಾಲಿ ಅವರು ಸಿಂದಗಿ ಹಳೆಯ ಬಜಾರದ್ ಕುಲಕರ್ಣಿ ಬಟ್ಟೆ ಅಂಗಡಿ ಬಳಿ ನಿಲ್ಲಿಸಿ ತೆರಳಿದ್ದರು ಎನ್ನಲಾಗಿದೆ. ಕೆಲ ಸಮಯದ ಬಳಿಕ ಕಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಯ ತೀವ್ರತೆಗೆ ವಾಹನ ಸಂಪೂರ್ಣವಾಗಿ ಸುಟ್ಟುಹೋಗಿದೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿಗೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಘಟನೆ ಕುರಿತು ಸಂಬಂಧಿಸಿದ ಸಿಂದಗಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರಿಗೆ ಬೆಂಕಿ ಹೊತ್ತಿಕೊಂಡಿರುವ ನಿಖರ ಕಾರಣದ ಕುರಿತು ತನಿಖೆ ತಿಳಿದು ಬರಬೇಕಿದೆ.





















