SK Home Ad
Home ಸಿನಿ ಮಿಲ್ಸ್ ಟಾಕ್ಸಿಕ್ ಜತೆಗೆ ಜಾಕಿ 42 ಚಿತ್ರದ ಥಿಯೇಟರಿಕಲ್ ಟ್ರೈಲರ್ ಪ್ರದರ್ಶನ

ಟಾಕ್ಸಿಕ್ ಜತೆಗೆ ಜಾಕಿ 42 ಚಿತ್ರದ ಥಿಯೇಟರಿಕಲ್ ಟ್ರೈಲರ್ ಪ್ರದರ್ಶನ

0
56

ಟಾಕ್ಸಿಕ್.. ಟಾಕ್ಸಿಕ್.. ಟಾಕ್ಸಿಕ್…
ಎಲ್ಲೆಲ್ಲೂ ಟಾಕ್ಸಿಕ್ ಮಯ… ಬುಧವಾರ ವಿಶ್ವದಾದ್ಯಂತ ಬಿಡುಗಡೆಯಾಗ್ತಿರೋ ಯಶ್ ಟಾಕ್ಸಿಕ್ ಸಿನಿಮಾದ ಜೊತೆಗೆ ಕರ್ನಾಟಕದಾದ್ಯಂತ ಕಿರಣ್ ರಾಜ್ ಅಭಿನಯದ ಜಾಕಿ 42 ಚಿತ್ರದ ಥಿಯೇಟರಿಕಲ್ ಟ್ರೈಲರ್ ಪ್ರದರ್ಶನವಾಗ್ತಿದೆ.

ಗೋಲ್ಡನ್ ಗೇಟ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಭಾರತಿ ಸತ್ಯನಾರಾಯಣ ನಿರ್ಮಿಸಿರುವ ʻಜಾಕಿ 42ʼ ಚಿತ್ರಕ್ಕೆ ಗುರುತೇಜ್ ಶೆಟ್ಟಿ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಆ್ಯಕ್ಷನ್ ಕಟ್ ಹೇಳಿದ್ದಾರೆ.

ಕುದುರೆ ರೇಸ್ ಹಿನ್ನೆಲೆಯ ಕಥಾಹಂದರದ ಚಿತ್ರ. ಗುಣಮಟ್ಟದ ಮೇಕಿಂಗ್ ಹಾಗೂ ವಿಶಿಷ್ಟವಾದ ಸ್ಕ್ರೀನ್‌ಪ್ಲೇ ಚಿತ್ರವಿದು ಎಂದು ಹೇಳ್ತಿರೋ ಚಿತ್ರತಂಡ, ಟಾಕ್ಸಿಕ್ ನೋಡೋ ಪ್ರೇಕ್ಷಕರಿಗೆ ಕುತೂಹಲ ಹುಟ್ಟಿಸಲಿದೆ. ಹಾಗೂ ಥಿಯೇಟರಲ್ಲೇ ಜಾಕಿ 42 ಸಿನಿಮಾವನ್ನ ನೋಡ್ಬೇಕು ಅಂತ ಪ್ರೇರಪಿಸಲಿದೆಯಂತೆ.

ಜಾಕಿ 42 ಚಿತ್ರದಲ್ಲಿ ಕಿರಣ್ ರಾಜ್, ಹೃತಿಕ್ ಶ್ರೀನಿವಾಸ್, ಯುಕ್ತಾ, ದೀಪಕ್ ರೈ, ರಾಜೇಂದ್ರ ಕಾರಂತ್, ಚೇತನ್ ರೈ ಮಣಿ, ಮಧುಸೂಧನ್ ರಾವ್, ಗಿರೀಶ್ ಹೆಗಡೆ, ಅರುಣ್ ಆಚಾರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರೋ ಜಾಕಿ 42 ಚಿತ್ರದ ಎರಡು ಹಾಡುಗಳು ಗಮನ ಸೆಳೆದಿದ್ದು, ಟಾಕ್ಸಿಕ್ ಸಿನಿಮಾದ ಥಿಯೇಟರ್‌ಗಳಲ್ಲಿ ಟ್ರೈಲರ್ ಪ್ರದರ್ಶಿಸೋ ಮೂಲಕ ಪ್ರಚಾರವನ್ನ ಆರಂಭಿಸಿದ್ದಾರೆ.

ಅಂದ ಹಾಗೆ ಸದ್ಯದಲ್ಲೇ ಮತ್ತೊಂದು ಹಾಡಿನ ಬಿಡುಗಡೆಗೆ ಅಣಿಯಾಗಿರೋ ಚಿತ್ರತಂಡ, ರಿಲೀಸ್ ಡೇಟ್ ಜೊತೆಗೆ ಸಿನಿಮಾ ಬಿಡುಗಡೆಯ ದಿನಾಂಕವನ್ನ ನಿಗದಿ ಮಾಡೋ ಯೋಜನೆಯಲ್ಲಿದೆ. ಅದೇನೆ ಇದ್ರೂ ಟಾಕ್ಸಿಕ್ ನೋಡೋ ಕನ್ನಡ ಪ್ರೇಕ್ಷಕರಿಗೆ ಥಿಯೇಟರ್‌ಗಳಲ್ಲಿ ಜಾಕಿ 42 ಅಚ್ಚರಿ ಕಾದಿದೆ.