ಹುಬ್ಬಳ್ಳಿ: ಇಲ್ಲಿನ ರಾಣಿ ಚನ್ನಮ್ಮ ಮೈದಾನದಲ್ಲಿ (ಈದ್ಗಾ) ೮೦ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಶನಿವಾರ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಬ್ರಿಟಿಷ್ ಮುಕ್ತ ಭಾರತ ಮಾಡಲು ಸಾಕಷ್ಟು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣ ತೆತ್ತಿದ್ದಾರೆ. ಅವರ ಹೋರಾಟ ಹಾಗೂ ತ್ಯಾಗವನ್ನು ನಾವು ಸ್ಮರಿಸಬೇಕು ಎಂದರು. ಹುಬ್ಬಳ್ಳಿಯ ನಾರಾಯಣ ಮಹದೇವ ಡೋಣಿ ಹದಿಮೂರು ವರ್ಷದ ಬಾಲಕನ ಬಲಿದಾನದ ದಿನವೇ ಐದು ವರ್ಷದ ಬಳಿಕ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಭಾರತ ವಿಶ್ವದ ಎಲ್ಲ ದೇಶಗಳಿಗಿಂತ ಭಿನ್ನವಾಗಿದೆ ಎಂದು ಹೇಳಿದರು.
ಜನರ ಕಲ್ಯಾಣಕ್ಕಾಗಿ ಮಹಾನಗರ ಪಾಲಿಕೆ ಪ್ರಯತ್ನಿಸುತ್ತಿದೆ. ಮಹಾನಗರ ಜನತೆಗೆ ಶುದ್ಧ ಕುಡಿಯುವ ನೀರು ಯೋಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಪಾಲಿಕೆ ಸದಸ್ಯರಿಗೆ ವಾರ್ಡ್ ವಿಕಾಸ ಯೋಜನೆಯಡಿ ಅಭಿವೃದ್ಧಿಗೆ ನಾಂದಿ ಹಾಡಿದ್ದೇವೆ. ೧೩೦ ಕೋಟಿ ತೆರಿಗೆ ಸಂಗ್ರಹಿಸಿ ೮೦ ಕೋಟಿ ಹಣವನ್ನು ಗುತ್ತಿಗೆದಾರರಿಗೆ ಹಣ ನೀಡಲಾಗಿದೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ, ರಾಜ್ಯಸಭಾ ಸದಸ್ಯ ಮಾ. ನಾಗರಾಜ, ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ, ಪಾಲಿಕೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
- 100 ವರ್ಷಗಳ UPSC ಪಯಣ: ಅಕ್ಟೋಬರ್ 1ರಂದು ಶತಮಾನೋತ್ಸವ
- 21 ದಿನಗಳ ಗಣೇಶೋತ್ಸವ: ಶ್ರೀಕಾಂತ ಶೆಟ್ಟಿಗೆ ಕಲಬುರಗಿ ಪ್ರವೇಶಕ್ಕೆ ಬ್ರೇಕ್
- ಸುಂದರ್ ಪಿಚೈ ಅವರನ್ನು ‘ದೈತ್ಯ’ ಎಂದ ಟ್ರಂಪ್: ಗೂಗಲ್ CEO ನೀಡಿದ ಪ್ರತಿಕ್ರಿಯೆ ವಿಡಿಯೋ ವೈರಲ್
- ಚಿತ್ರದುರ್ಗ: ಒಳಮೀಸಲಾತಿಗೆ ಹೆಚ್ಚು ಸಹಾಯ ಮಾಡಿದವರು ಬಿ.ಎಸ್.ವೈ – ಮಾದಾರ ಚನ್ನಯ್ಯ ಶ್ರೀ
- “ಮೀಸಲಾತಿಗೆ ಕಲ್ಲು ಹಾಕಿದ ಕಾಂಗ್ರೆಸ್ ಕಪಟ ನಾಟಕ ಮಾಡುತ್ತಿದೆ” : ಬಿ.ವೈ. ವಿಜಯೇಂದ್ರ ವಾಗ್ದಾಳಿ






















