SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಮಹಾ ಮಳೆ: ಅಪಾಯದ ಮಟ್ಟ ಮೀರಿದ ದೂಧಗಂಗಾ-ಕೃಷ್ಣಾ

ಮಹಾ ಮಳೆ: ಅಪಾಯದ ಮಟ್ಟ ಮೀರಿದ ದೂಧಗಂಗಾ-ಕೃಷ್ಣಾ

0
60

ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ವಿವಿಧ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿದೆ. ಮಹಾದಿಂದ ರಾಜ್ಯಕ್ಕೆ 91,044 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದಾಗಿ ದೂಧಗಂಗಾ-ಕೃಷ್ಣಾ ನೀರಿನ ಮಟ್ಟ ಮತ್ತೆ ಒಂದು ಅಡಿ ಏರಿಕೆಯಾಗಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ.

ಕೊಯ್ನಾ-11,680 ಮತ್ತು ರಾಧಾನಗರ-6,900 ಕ್ಯೂಸೆಕ್ ನೀರು ಬಿಡುಗಡೆಯಿಂದಾಗಿ ಸುಳಕೂಡ ಬ್ಯಾರೇಜ್ ಮುಖಾಂತರ ದೂಧಗಂಗಾ ನದಿಗೆ 16,544 ಕ್ಯೂಸೆಕ್ ಮತ್ತು ಕೃಷ್ಣಾ ನದಿಗೆ ರಾಜಾಪುರ ಬ್ಯಾರೇಜ್ ಮುಖಾಂತರ 74,500 ಕ್ಯೂಸೆಕ್ ಹೀಗೆ ಒಟ್ಟು ರಾಜ್ಯಕ್ಕೆ 91,044 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಕೊಯ್ನಾ-121 ಮಿಮಿ, ನವಜಾ-174 ಮಿಮಿ ಮಳೆಯಾಗಿರುವ ಕುರಿತು ವರದಿಯಾಗಿದೆ. ವೇದಗಂಗಾ ನದಿಯ ಜತ್ರಾಟ-ಭಿವಸಿ, ಅಕ್ಕೋಳ-ಸಿದ್ನಾಳ, ಬಾರವಾಡ-ಕುನ್ನುರ ಮತ್ತು ಭೋಜ-ಶಿವಾಪುರವಾಡಿ, ದೂಧಗಂಗಾ ನದಿಯ ಕಾರದಗಾ-ಭೋಜ ಮತ್ತು ಮಲಿಕವಾಡ-ದತ್ತವಾಡ ಕೃಷ್ಣಾ ನದಿಯ ಕಲ್ಲೋಳ-ಯಡೂರ ಮತ್ತು ಮಾಂಜರಿ-ಸವದತ್ತಿ ಹೀಗೆ ಕಳೆದ 4 ದಿನಗಳಿಂದ ಗಡಿಭಾಗದ 8 ಎಲ್ಲಾ ಬ್ಯಾರೇಜ್‌ಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಸುತ್ತುವರೆದು ಪ್ರವಾಸ ಬೆಳೆಸುವ ಪ್ರಸಂಗ ಬಂದೊದಗಿದೆ.