SK Home Ad
Home ನಮ್ಮ ಜಿಲ್ಲೆ ಮೈಸೂರು ತಮಿಳುನಾಡಿಗೆ ನೀರು ಬಿಟ್ಟು ಸರ್ಕಾರ ಮಣ್ಣು ತಿನ್ನುವ ಕೆಲಸ ಮಾಡಿದೆ

ತಮಿಳುನಾಡಿಗೆ ನೀರು ಬಿಟ್ಟು ಸರ್ಕಾರ ಮಣ್ಣು ತಿನ್ನುವ ಕೆಲಸ ಮಾಡಿದೆ

0
29

ಮೈಸೂರು: ತಮಿಳುನಾಡಿಗೆ ನೀರು ಬಿಡುವ ಮೂಲಕ ಸರ್ಕಾರ ಮಣ್ಣು ತಿನ್ನುವ ಕೆಲಸ ಮಾಡಿಕೊಂಡಿದೆ. ಸಿಎಂ ಮನೆಗೆ ಮಾರಿ ಊರಿಗೆ ಉಪಕಾರಿ ಎಂಬಾತಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕದ್ದು ಮುಚ್ಚಿ ಈಗಾಗಲೇ ಬಹಳಷ್ಟು ನೀರನ್ನು ಸರ್ಕಾರ ತಮಿಳುನಾಡಿಗೆ ಹರಿಸಿದೆ. ಈಗ ಟ್ರಿಬುನಲ್ ಮುಂದೆಯೂ ಸರಿಯಾದ ವಾದ ಮಾಡದೆ ಕಾವೇರಿ ಭಾಗದ ರೈತರಿಗೆ ವಿಷ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೇಟ್ ಫಿಕ್ಸ್ ಆಗದೆ ಡೇಟ್ ಫಿಕ್ಸ್ ಆಗಲ್ಲ: ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರು ಕದ್ದು ಮುಚ್ಚಿ ಯಾಕೆ ನೀರು ಬಿಟ್ಟರು. ಟ್ರಿಬುನಲ್ ಮುಂದೆ ಯಾಕೆ ಪ್ರಬಲ ವಾದ ಮಾಡಲಿಲ್ಲ. ರಾಜ್ಯ ಸರ್ಕಾರಕ್ಕೆ ರೈತರು ಆದ್ಯತೆಯಾಗಿ ಉಳಿದಿಲ್ಲ. ಒಂದು ತಿಂಗಳಿನಿಂದ ಬರಿ ಸಂಪುಟ ಮಾಡುವ ಸರ್ಕಸ್‌ನಲ್ಲೇ ಇದ್ದಾರೆ. ರೇಟ್ ಫಿಕ್ಸ್ ಆಗುವವರೆಗೂ ಸಂಪುಟ ವಿಸ್ತರಣೆಯ ಡೇಟ್ ಫಿಕ್ಸ್ ಆಗುವುದಿಲ್ಲ. ಇವರ ಈ ತಿಕ್ಕಾಟದಲ್ಲಿ ರಾಜ್ಯದ ಸಮಸ್ಯೆಗಳು ದೊಡ್ಡದಾಗುತ್ತಿವೆ. ಯಾರನ್ನೊ ಓಲೈಸಿಕೊಳ್ಳಲು ರಾಜ್ಯ ಸರ್ಕಾರ ಕರ್ನಾಟಕ ರೈತರನ್ನ ಬಲಿ ಕೊಡುತ್ತಿದೆ. ಬಿಜೆಪಿ ಯಾವಗಲೂ ರೈತರ ಪರವಾಗಿ ನಿಲ್ಲುತ್ತದೆ ಎಂದರು.