SK Home Ad
Home ನಮ್ಮ ಜಿಲ್ಲೆ ಮೈಸೂರು ಮೈಸೂರು ದಸರಾ: ಅರಮನೆ ಆವರಣಕ್ಕೆ ಗಜಪಡೆ ಆಗಮನ

ಮೈಸೂರು ದಸರಾ: ಅರಮನೆ ಆವರಣಕ್ಕೆ ಗಜಪಡೆ ಆಗಮನ

0
62

ಸಂ.ಕ.ಸಮಾಚಾರ ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಅರಮನೆ ಆವರಣಕ್ಕೆ ಆಗಮಿಸಿದ ಗಜಪಡೆಗೆ ಮೈಸೂರು ಅರಮನೆ ಮಂಡಳಿ ಹಾಗೂ ರಾಜ್ಯ ಸರ್ಕಾರದ ವತಿಯಿಂದ ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಅರಣ್ಯ,ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಜಯಮಾರ್ತಾಂಡ ದ್ವಾರದಲ್ಲಿ ಅತ್ಯಂತ ವಿಜೃಂಭಣೆಯಿಂದ ಸಾಂಪ್ರದಾಯಿಕವಾಗಿ ಗಜಪಡೆಗಳಿಗೆ ಸ್ವಾಗತ ಕೋರಿದರು.

ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಯತೀಂದ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿ ಆಗಸ್ಟ್ 26 ರಂದು ಗಜಪಯಣ ಪ್ರಾರಂಭಗೊಂಡು, ಆಗಸ್ಟ್ 28 ರಂದು ಆನೆಗಳು ಅರಮನೆ ತಲುಪಿವೆ. ಈ ದಿನ ಅರಣ್ಯ ಸಚಿವರ ನೇತೃತ್ವದಲ್ಲಿ ನಾವು ದಸರಾ ಉತ್ಸವದಲ್ಲಿ ಭಾಗವಹಿಸುವ ಎಲ್ಲಾ ಆನೆಗಳನ್ನು ಹಾಗೂ ಮಾವುತರು-ಕಾವಾಡಿಗರನ್ನು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅರಮನೆಗೆ ಬರಮಾಡಿಕೊಂಡಿದ್ದೇವೆ ಎಂದು ಹೇಳಿದರು.

ಈ ಬಾರಿಯ ದಸರಾವನ್ನು ನಿರ್ವಿಘ್ನವಾಗಿ ಹಾಗೂ ಯಶಸ್ವಿಯಾಗಿ ನಡೆಸಿಕೊಡುವಂತೆ ಮಾವುತರು ಮತ್ತು ಕಾವಾಡಿಗರಿಗೆ,ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಹಾಗೆಯೇ, ಎರಡು ತಿಂಗಳ ಕಾಲ ಇಲ್ಲಿಯೇ ಇದ್ದು ಆನೆಗಳಿಗೆ ಉತ್ತಮ ತರಬೇತಿ ನೀಡಲು ಮಾವುತರು ಮತ್ತು ಕಾವಾಡಿಗರಿಗೆ ಮೂಲಭೂತ ಕಿಟ್‌ಗಳನ್ನು ವಿತರಿಸಲಾಗಿದೆ ಎಂದರು.

ಮೊದಲ ಹಂತದಲ್ಲಿ 9 ಆನೆ ಗಳಾದ ಮಹೇಂದ್ರ, ಶ್ರೀಕಂಠ, ಲಕ್ಷ್ಮೀ, ಏಕಲವ್ಯ, ಧನಂಜಯ, ಗೋಪಿ, ಕಾವೇರಿ, ಪ್ರಶಾಂತ, ಶ್ರೀರಾಮ ಆನೆಗಳು ಅರಮನೆಗೆ ಆಗಮಿಸಿದ್ದು ವಿವಿಧ ಕಾಲತಂಡಗಳಾದ ಡೊಳ್ಳುಕುಣಿತ, ವಾದ್ಯ, ಕಂಸಾಳೆ ಮೂಲಕ ಗಜಪಡೆಗಳಿಗೆ ಸ್ವಾಗತ ನೀಡಲಾಯಿತು.

ಇದೆ ಸಂದರ್ಭದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್‌. ಶ್ರೀವತ್ಸ,ಚಾಮರಾಜ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ,ವಿಧಾನ ಪರಿಷತ್‌ ಸದಸ್ಯರು ಸಿ.ಎನ್. ಮಂಜೇಗೌಡ,ಜಿಲ್ಲಾಧಿಕಾರಿ ಜಿ. ಲಕ್ಷಿಂಕಾಂತರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ ಯುಕೇಶ್ ಕುಮಾರ್ ಸೇರಿದಂತೆ ಮತ್ತಿತರರು ಇದ್ದರು.