SK Home Ad
Home ಸಿನಿ ಮಿಲ್ಸ್ ಭಟ್ರ ಸಾಹಿತ್ಯ, ಶರಣ್ ಧ್ವನಿ: ಗೆಳೆಯರ ಮನಗೆದ್ದ ‘ಚಡ್ಡಿ ಬಡ್ಡಿ’ ಹಾಡು!

ಭಟ್ರ ಸಾಹಿತ್ಯ, ಶರಣ್ ಧ್ವನಿ: ಗೆಳೆಯರ ಮನಗೆದ್ದ ‘ಚಡ್ಡಿ ಬಡ್ಡಿ’ ಹಾಡು!

0
78

ಯೋಗರಾಜ್ ಭಟ್ ಸಾಹಿತ್ಯ, ಪೂರ್ಣಚಂದ್ರ ತೇಜಸ್ವಿ ಸಂಗೀತ – ಶರಣ್–ನವೀನ್ ಸಜ್ಜು ಧ್ವನಿಯಲ್ಲಿ ಮೂಡಿದ ‘ಚಡ್ಡಿ ಬಡ್ಡಿ’; ‘ಉಸಿರಾಡೋಕೆ ಒಬ್ಬನೇ ಒಬ್ಬ ಗೆಳೆಯ ಸಾಕು’ – ಮನಗೆದ್ದ ‘ಚಂದ್ರಹಾಸ’ ಚಿತ್ರದ ಹಾಡು

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸ್ನೇಹದ ಮಹತ್ವವನ್ನು ಸಾರುವ ಹಾಡುಗಳು ಪ್ರೇಕ್ಷಕರ ಮನಸ್ಸಿನಲ್ಲಿ ಸದಾ ವಿಶೇಷ ಸ್ಥಾನ ಪಡೆದುಕೊಂಡಿವೆ. ಇದೀಗ ಆ ಸಾಲಿಗೆ ಹೊಸ ಸೇರ್ಪಡೆಯಾಗಿ ‘ಚಂದ್ರಹಾಸ’ ಚಿತ್ರದ ‘ಚಡ್ಡಿ ಬಡ್ಡಿ’ ಹಾಡು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆಯುತ್ತಿದೆ. ಬಾಲ್ಯದ ಗೆಳೆಯರ ನಡುವಿನ ನಿಷ್ಕಪಟ ಸ್ನೇಹವನ್ನು ಹೃದಯಸ್ಪರ್ಶಿಯಾಗಿ ಕಟ್ಟಿಕೊಡುವ ಈ ಹಾಡು, ಬಿಡುಗಡೆಯಾಗಿ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಹಾಡಿನ ವಿಶೇಷ ಆಕರ್ಷಣೆಯೆಂದರೆ ಕನ್ನಡದ ಖ್ಯಾತ ನಿರ್ದೇಶಕ ಹಾಗೂ ಗೀತರಚನೆಕಾರ ಯೋಗರಾಜ್ ಭಟ್ ಅವರ ಸಾಹಿತ್ಯ. ಅವರ ವಿಶಿಷ್ಟ ಶೈಲಿಯ ಪದಗಳು ಸ್ನೇಹದ ಭಾವನೆಯನ್ನು ಅತ್ಯಂತ ಸರಳವಾಗಿ ಹಾಗೂ ಮನಮುಟ್ಟುವ ರೀತಿಯಲ್ಲಿ ಅಭಿವ್ಯಕ್ತಿಸಿವೆ. “ಉಸಿರಾಡೋಕೆ ಒಬ್ಬನೇ ಒಬ್ಬ ಗೆಳೆಯ ಸಾಕು…” ಎಂಬ ಸಾಲು ಈಗಾಗಲೇ ಯುವಜನರಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ.

ಇದನ್ನೂ ಓದಿ: 20 ದಿನಗಳ ಉಪವಾಸ: ಸೋನಮ್ ವಾಂಗ್ಚುಕ್ ಆಸ್ಪತ್ರೆಗೆ ದಾಖಲು

ಪೂರ್ಣಚಂದ್ರ ತೇಜಸ್ವಿ ಸಂಗೀತದ ಹೊಸ ಮ್ಯಾಜಿಕ್ : ‘ಲೂಸಿಯಾ’, ‘ಯು ಟರ್ನ್’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಿಗೆ ಸಂಗೀತ ನೀಡಿರುವ ಪೂರ್ಣಚಂದ್ರ ತೇಜಸ್ವಿ ಎಸ್.ವಿ. ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸ್ನೇಹದ ಭಾವನೆಗೆ ತಕ್ಕಂತೆ ಮಧುರವಾದ ಮ್ಯೂಸಿಕ್ ನೀಡಿರುವ ಅವರು, ಹಾಡಿನ ಗುಣಮಟ್ಟ ಹೆಚ್ಚಿಸಲು ಅಂತರರಾಷ್ಟ್ರೀಯ ಮಟ್ಟದ ವಾದ್ಯಗಾರರನ್ನು ಬಳಸಿಕೊಂಡಿರುವುದು ವಿಶೇಷ. ಸಂಗೀತ ಮತ್ತು ಸಾಹಿತ್ಯದ ಸಮನ್ವಯದಿಂದ ‘ಚಡ್ಡಿ ಬಡ್ಡಿ’ ಹಾಡು ಯುವಕರ ಪ್ಲೇಲಿಸ್ಟ್‌ನಲ್ಲಿ ಸ್ಥಾನ ಪಡೆಯುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ.

ಶರಣ್ ಮತ್ತು ನವೀನ್ ಸಜ್ಜು ಧ್ವನಿಯ ಜಾದು : ಈ ಹಾಡನ್ನು ಜನಪ್ರಿಯ ಗಾಯಕ ನವೀನ್ ಸಜ್ಜು ಹಾಗೂ ನಟ ಶರಣ್ ಜಂಟಿಯಾಗಿ ಹಾಡಿದ್ದಾರೆ. ಇಬ್ಬರ ಧ್ವನಿಯೂ ಹಾಡಿನ ಭಾವನಾತ್ಮಕತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಸ್ನೇಹದ ಆತ್ಮೀಯತೆಯನ್ನು ಜೀವಂತವಾಗಿ ಮೂಡಿಸಿದೆ.

ಇದನ್ನೂ ಓದಿ: ವಾಂಗ್ಚುಕ್ ಬಳಿಕ ಅಭಿಜೀತ್ ದೀಪ್ಕೆ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ

ಕರಾವಳಿ ಹಾಗೂ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಬಾಲ್ಯದ ಆತ್ಮೀಯ ಗೆಳೆಯರನ್ನು ‘ಚಡ್ಡಿ ಬಡ್ಡಿ’ ಎಂದು ಕರೆಯುವ ಜನಪ್ರಿಯ ಪದವನ್ನು ಹಾಡಿನ ಶೀರ್ಷಿಕೆಯಾಗಿಯೇ ಬಳಸಲಾಗಿದೆ. ಇಬ್ಬರು ಆತ್ಮೀಯ ಸ್ನೇಹಿತರ ನಡುವಿನ ನಿಸ್ವಾರ್ಥ ಸಂಬಂಧವನ್ನು ಹಾಡಿನಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ.

ಚಂದ್ರಹಾಸ’ ಚಿತ್ರದಲ್ಲಿ ಪ್ರತಿಭಾವಂತ ಕಲಾವಿದರು : ಆನಂದ್ ಎಸ್. ಕಲಕಬಂಡಿ ನಿರ್ದೇಶನದ ‘ಚಂದ್ರಹಾಸ’ ಚಿತ್ರದಲ್ಲಿ ಹರೀಶ್ ಹಿರಿಯೂರು (ಕಾಮಿಡಿ ಕಿಲಾಡಿಗಳು ಖ್ಯಾತಿ), ಛಾಯಾಶ್ರೀ, ನಿಂಗರಾಜು ಮಂಡ್ಯ ಹಾಗೂ ಸಂತೋಷ್ ಕೇರಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ‘ಕರಾವಳಿ’ ಕಿರಿಕ್: ವಿವಾದಕ್ಕೆ ಬೇಸರ – ರಾಜ್ ಬಿ ಶೆಟ್ಟಿ ಭಾವುಕ ಮನವಿ

ಹಾಡು ಬಿಡುಗಡೆಯಾಗುವ ಮುನ್ನ ಚಿತ್ರತಂಡ ಕನ್ನಡ ಚಿತ್ರರಂಗದ ಹಲವು ಪ್ರಮುಖ ತಾರೆಯರನ್ನು ಭೇಟಿ ಮಾಡಿ ವಿಶೇಷ ರೀತಿಯಲ್ಲಿ ಚಿತ್ರದ ಪ್ರಚಾರ ನಡೆಸಿದ್ದು, ಅದಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಡಿ ಬಿಟ್ಸ್‌ಗೆ ಸಂಗೀತ ಹಕ್ಕು : ಈ ಚಿತ್ರದ ಆಡಿಯೋ ಹಾಗೂ ಡಿಜಿಟಲ್ ಸಂಗೀತ ಹಕ್ಕುಗಳನ್ನು ಖ್ಯಾತ ಡಿ ಬಿಟ್ಸ್ (D Beats) ಸಂಸ್ಥೆ ಪಡೆದುಕೊಂಡಿದೆ. ಅಮರಶ್ರೀ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಬಸವಂತಗೌಡ ಪಾಟೀಲ್ ಬಂಡವಾಳ ಹೂಡಿದ್ದು, ಬಸಣ್ಣ ಕಮತರ್ ಲೈನ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಇದನ್ನೂ ಓದಿ: ರೈತರು ಕಡಿಮೆ ನೀರಿನ ಬೆಳೆಗಳತ್ತ ಮುಖ ಮಾಡಲಿ: ಸುಷ್ಮಾ ಗೋಡಬೋಲೆ

ಸ್ನೇಹದ ಭಾವನೆ, ಯೋಗರಾಜ್ ಭಟ್ ಅವರ ಸಾಹಿತ್ಯ, ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಶರಣ್–ನವೀನ್ ಸಜ್ಜು ಅವರ ಗಾಯನದ ಸಂಗಮವಾಗಿರುವ ‘ಚಡ್ಡಿ ಬಡ್ಡಿ’ ಹಾಡು ಈಗಾಗಲೇ ಕನ್ನಡ ಸಂಗೀತಪ್ರಿಯರ ಮೆಚ್ಚುಗೆ ಗಳಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನೂ ಮತ್ತಷ್ಟು ಹೆಚ್ಚಿಸಿದೆ.