SK Home Ad
Home ಸಿನಿ ಮಿಲ್ಸ್ ಆಕ್ಷನ್, ಮಾಸ್ ಮತ್ತು ಪವರ್‌ಫುಲ್ ಲುಕ್: ‘ಪರಾಕ್’ ಟೀಸರ್ ವೈರಲ್

ಆಕ್ಷನ್, ಮಾಸ್ ಮತ್ತು ಪವರ್‌ಫುಲ್ ಲುಕ್: ‘ಪರಾಕ್’ ಟೀಸರ್ ವೈರಲ್

0
60

ಶ್ರೀಮುರುಳಿ ಅಭಿನಯದ ‘ಪರಾಕ್’ ಟೀಸರ್ ರಿಲೀಸ್; ಆಕ್ಷನ್, ಮಾಸ್ ಎಂಟರ್‌ಟೈನರ್‌ಗೆ ಸಿನಿಪ್ರಿಯರಿಂದ ಮೆಚ್ಚುಗೆ

ಬೆಂಗಳೂರು: ನಟ ಶ್ರೀಮುರುಳಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಪರಾಕ್’ ಚಿತ್ರದ ಟೀಸರ್ ಅದ್ದೂರಿಯಾಗಿ ಬಿಡುಗಡೆಯಾಗಿದ್ದು, ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬೆಂಗಳೂರಿನ ಆರ್.ಆರ್. ನಗರದ ವೈಜಿಆರ್ ಮಾಲ್‌ನಲ್ಲಿ ಇಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಚಿತ್ರದ ಟೀಸರ್ ಅನಾವರಣಗೊಂಡಿತು.

ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದ್ದು, ಶ್ರೀಮುರುಳಿಯ ಮಾಸ್ ಅವತಾರ, ಆಕ್ಷನ್ ದೃಶ್ಯಗಳು ಹಾಗೂ ಚಿತ್ರದ ಮೇಕಿಂಗ್‌ಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ದಾವಣಗೆರೆಯ ನಿರ್ದೇಶಕನ ಮೊದಲ ಸಿನಿಮಾ : ‘ಪರಾಕ್’ ಚಿತ್ರಕ್ಕೆ ದಾವಣಗೆರೆಯ ಯುವ ನಿರ್ದೇಶಕ ಹಾಲೇಶ್ ಕೋಗುಂಡೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಹಲವು ಕಿರುಚಿತ್ರಗಳನ್ನು ನಿರ್ಮಿಸಿ ಗಮನ ಸೆಳೆದಿದ್ದ ಹಾಲೇಶ್, ಇದೀಗ ಮೊದಲ ಬಾರಿಗೆ ಪೂರ್ಣ ಪ್ರಮಾಣದ ವಾಣಿಜ್ಯ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಹೊಸ ಪ್ರತಿಭಾವಂತ ನಿರ್ದೇಶಕ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: ಅಕ್ರಮ ಆರೋಪದ ಬೆನ್ನಲ್ಲೇ KPSC ಅಧ್ಯಕ್ಷ ಸಾಹುಕಾರ್‌ ಅಮಾನತು

ಬೆಣ್ಣೆನಗರಿಯ ಪ್ರತಿಭೆಗಳಿಗೆ ಅವಕಾಶ : ಚಿತ್ರದ ಮತ್ತೊಂದು ವಿಶೇಷವೆಂದರೆ, ಶ್ರೀಮುರುಳಿ ಹೊರತುಪಡಿಸಿ ಸಿನಿಮಾದಲ್ಲಿ ನಟಿಸಿರುವ ಬಹುತೇಕ ಕಲಾವಿದರು ದಾವಣಗೆರೆ ಜಿಲ್ಲೆಯವರೇ ಆಗಿದ್ದಾರೆ. ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಟೀಸರ್‌ನಲ್ಲಿ ಏನಿದೆ? : ಬಿಡುಗಡೆಯಾದ ಟೀಸರ್‌ನಲ್ಲಿ ಶ್ರೀಮುರುಳಿ ಅವರ ಮಾಸ್ ಲುಕ್, ಆಕ್ಷನ್ ಸನ್ನಿವೇಶಗಳು ಹಾಗೂ ಭರ್ಜರಿ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಚಿತ್ರವು ಆಕ್ಷನ್ ಮತ್ತು ಭಾವನಾತ್ಮಕ ಅಂಶಗಳನ್ನು ಒಳಗೊಂಡ ಮಾಸ್ ಎಂಟರ್‌ಟೈನರ್ ಆಗಿರಬಹುದೆಂಬ ಸುಳಿವನ್ನು ಟೀಸರ್ ನೀಡಿದೆ.

ಆಡಿಯೋ ಹಕ್ಕು ಖರೀದಿ: ಚಿತ್ರದ ಹಾಡುಗಳ ಮೇಲೂ ಈಗಾಗಲೇ ನಿರೀಕ್ಷೆ ಹೆಚ್ಚಾಗಿದ್ದು, ‘ಪರಾಕ್’ ಚಿತ್ರದ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಸಂಸ್ಥೆ ಖರೀದಿಸಿದೆ. ಚಿತ್ರತಂಡದ ಈ ಬೆಳವಣಿಗೆ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಯೋಗಿ ಸಮ್ಮುಖದಲ್ಲಿ ಲಕ್ನೋ-ಕಾನ್ಪುರ ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆ

ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ : ಶ್ರೀಮುರುಳಿ ಅವರು ‘ಬಘೀರ’ ಚಿತ್ರದ ಬಳಿಕ ಮತ್ತೊಮ್ಮೆ ಪವರ್‌ಫುಲ್ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದು, ‘ಪರಾಕ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.