ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಬುಧವಾರ ಕಳೆದ 22 ದಿನಗಳಿಂದ ಶ್ರೀಗುರು ರಾಯರ ಹುಂಡಿಯಲ್ಲಿ ಭಕ್ತರು ಹಾಕಿರುವ ಕಾಣಿಕೆಯ ಹಣ ಎಣಿಕೆ ಕಾರ್ಯವನ್ನು ನಡೆಸಲಾಗಿದ್ದು, ಒಟ್ಟು 3.71 ಕೋಟಿ ರೂ. ಹಣ ಸಂಗ್ರಹಣೆಯಾಗಿದೆ.
3,60,37,959 ರೂ.ಗಳ ಮೌಲ್ಯದ ನೋಟುಗಳು, 10,97,300 ಮೊತ್ತದ ನಾಣ್ಯಗಳು ಸೇರಿದಂತೆ ಒಟ್ಟು 3,71,35,259 ನಗದು ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ. ಅಲ್ಲದೇ 23 ಗ್ರಾಂಗಳಷ್ಟು ಚಿನ್ನ, 1085 ಗ್ರಾಂ ಬೆಳ್ಳಿ(ರಜತ) ಸಂಗ್ರಹವಾಗಿದೆ ಎಂದು ವ್ಯವಸ್ಥಾಪಕ ಎಸ್.ಕೆ ಶ್ರೀನಿವಾಸರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





















