SK Home Ad
Home ನಮ್ಮ ಜಿಲ್ಲೆ ಯಾದಗಿರಿ ಬಾರದ ಮಳೆ, ಒಣಗಿದ ಬೆಳೆ; ನೊಂದ ರೈತ ಆತ್ಮಹತ್ಯೆ

ಬಾರದ ಮಳೆ, ಒಣಗಿದ ಬೆಳೆ; ನೊಂದ ರೈತ ಆತ್ಮಹತ್ಯೆ

0
26

ಯಾದಗಿರಿ: ಮಳೆ ಬಾರದೇ ಬಿತ್ತಿದ ಹತ್ತಿ ಬೆಳೆ ಒಣಗಿದ್ದಕ್ಕೆ ನೊಂದ ರೈತನೊಬ್ಬ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಮಲ್ಲಿಕಾರ್ಜುನ (38) ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು, ಈತ 8 ಎಕರೆ ಭೂಮಿ ಲೀಜ್‌ಗೆ ಹಾಕಿಕೊಂಡು ವ್ಯವಸಾಯ ಮಾಡುತ್ತಿದ್ದ. ಎರಡು ಸಲ ಹತ್ತಿ ಬೀಜ ಬಿತ್ತಿದ್ದ. ಆದರೂ ಸಕಾಲಕ್ಕೆ ಮಳೆ ಬಾರದೇ ಇರುವುದರಿಂದ ಹೊಲದಲ್ಲಿ ಬೆಳೆ ಒಣಗುತ್ತಿರುವ ಕಂಡು ಬೇಸತ್ತ ಮಲ್ಲಿಕಾರ್ಜುನ ಸೋಮವಾರ ಕ್ರೀಮಿನಾಶಕ ವಸ್ತು ತೆಗೆದುಕೊಂಡು ಹೊಲಕ್ಕೆ ಬಂದು ಸೇವಿಸಿದ್ದಾನೆ.

ವಿಷಯ ತಿಳಿದ ಕುಟುಂಬಸ್ಥರು ಕೂಡಲೇ ಯಾದಗಿರಿ ಯಿಮ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೂ ಗುಣಮುಖವಾಗದ ಆತ ಮಂಗಳವಾರ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾನೆ. ಮಲ್ಲಿಕಾರ್ಜುನ ಸಾವಿನಿಂದಾಗಿ‌ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ.