SK Home Ad
Home ಸಿನಿ ಮಿಲ್ಸ್ ತಂದೆ-ಮಗನ ಹೊಸ ಸಿನಿಮಾಗಳಿಗೆ ಮುಹೂರ್ತ: DK ಸಮ್ಮುಖದಲ್ಲಿ ಶುಭಾರಂಭ

ತಂದೆ-ಮಗನ ಹೊಸ ಸಿನಿಮಾಗಳಿಗೆ ಮುಹೂರ್ತ: DK ಸಮ್ಮುಖದಲ್ಲಿ ಶುಭಾರಂಭ

0
89

ಬೆಂಗಳೂರು: ಚನ್ನಪಟ್ಟಣ ಶಾಸಕ ಹಾಗೂ ನಟ ಸಿ.ಪಿ. ಯೋಗೇಶ್ವರ್ ಅವರ ಪುತ್ರ ಧ್ಯಾನ್ ಯೋಗೇಶ್ವರ್ ಅವರ ಚಲನಚಿತ್ರ ಪಯಣಕ್ಕೆ ಅಧಿಕೃತ ಚಾಲನೆ ದೊರೆತಿದೆ. ಧ್ಯಾನ್ ಅಭಿನಯದ ಹೊಸ ಚಿತ್ರದ ಮುಹೂರ್ತ ಸಮಾರಂಭವು ಅದ್ದೂರಿಯಾಗಿ ನೆರವೇರಿದ್ದು, ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಸಿ.ಪಿ. ಯೋಗೇಶ್ವರ್ ಅವರು ತಮ್ಮ ಪಿಎಂಜಿ ಫಿಲಂ ಪ್ರೊಡಕ್ಷನ್ ಪ್ರೈ. ಲಿ. ಬ್ಯಾನರ್‌ನಲ್ಲಿ ಪುತ್ರ ಧ್ಯಾನ್ ಯೋಗೇಶ್ವರ್ ಅವರನ್ನು ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿರುವುದಾಗಿ ತಿಳಿಸಿದ್ದಾರೆ. ಹಿರಿಯ ನಿರ್ದೇಶಕ ನಾಗಣ್ಣ ನಿರ್ದೇಶನದ ‘ಕರ್ಣಾಟಬಲಂ ಅಜೇಯಂ’ ಚಿತ್ರದಲ್ಲಿ ತಂದೆ-ಮಗ ಇಬ್ಬರೂ ಒಟ್ಟಿಗೆ ಅಭಿನಯಿಸುತ್ತಿದ್ದು, ಸುಮಾರು 25 ವರ್ಷಗಳ ಬಳಿಕ ಯೋಗೇಶ್ವರ್ ಮತ್ತೆ ನಟನಾಗಿ ಮರಳುತ್ತಿದ್ದಾರೆ. ಇದೇ ವೇಳೆ, ತಮ್ಮ ರಾಜಯೋಗಿ ಫಿಲಂಸ್ ಮೂಲಕ ‘ಸೈನಿಕ 2’ ಚಿತ್ರವನ್ನೂ ನಿರ್ಮಿಸುತ್ತಿದ್ದು, ಪುನೀತ್ ರುದ್ರನಾಗ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರದಲ್ಲೂ ತಂದೆ-ಮಗ ಜೊತೆಯಾಗಿ ನಟಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ‘ಗ್ರಾಮಾಯಣ’ Review: ಗ್ರಾಮೀಣ ಬದುಕಿನ ಹೋರಾಟಕ್ಕೆ ಸಿನಿ ರೂಪ

ಸ್ಯಾಂಡಲ್‌ವುಡ್‌ಗೆ ಧ್ಯಾನ್ ಎಂಟ್ರಿ : ಧ್ಯಾನ್ ಯೋಗೇಶ್ವರ್ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದು, ಅವರ ಲಾಂಚ್‌ಗೆ ವಿಶೇಷ ಸಿದ್ಧತೆ ಮಾಡಲಾಗಿದೆ. ಹಿರಿಯ ನಿರ್ದೇಶಕ ನಾಗಣ್ಣ ನಿರ್ದೇಶನದ ‘ಕರ್ಣಾಟಬಲಂ ಅಜೇಯಂ’ ಚಿತ್ರದ ಮೂಲಕ ಧ್ಯಾನ್ ನಾಯಕನಾಗಿ ಪರಿಚಯಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ತಂದೆ-ಮಗ ಒಟ್ಟಿಗೆ ತೆರೆ ಮೇಲೆ : ಧ್ಯಾನ್ ಅವರ ಚೊಚ್ಚಲ ಚಿತ್ರದ ಜೊತೆಗೆ, ಸಿ.ಪಿ. ಯೋಗೇಶ್ವರ್ ಅಭಿನಯದ ಸೂಪರ್‌ಹಿಟ್ ಸಿನಿಮಾ ‘ಸೈನಿಕ’ ಚಿತ್ರದ ಮುಂದುವರಿದ ಭಾಗ ‘ಸೈನಿಕ 2’ ಕೂಡ ಘೋಷಣೆಯಾಗಿದೆ. ವಿಶೇಷವೆಂದರೆ, ಈ ಎರಡೂ ಸಿನಿಮಾಗಳಲ್ಲಿ ತಂದೆ-ಮಗ ಒಟ್ಟಿಗೆ ಅಭಿನಯಿಸಲಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ: ‘ಲವ್ ಸೀಸನ್ಸ್’ Review : ಪ್ರೀತಿಯ ಋತುಗಳ ಕಥೆಗೆ ಹೊಸ ಸ್ಪರ್ಶ

ಎರಡೂ ಸಿನಿಮಾಗಳ ಒಂದು ಎಳೆಯಲ್ಲಿ ಹೇಳುವುದಾದರೆ ತಂದೆಯ ಚಿತ್ರ ಸೈನಿಕ ಜೈ ಜವಾನ್‌ ಆದರೆ ಮಗ ಧ್ಯಾನ್ ಯೋಗೇಶ್ವರ್ ಚಿತ್ರ ಕರ್ನಾಟಬಲಂ ಚಿತ್ರವು ಜೈ ಕಿಸಾನ್‌ ಆಗಿದೆ.

ಗಣ್ಯರ ಸಮ್ಮುಖದಲ್ಲಿ ಮುಹೂರ್ತ : ಚಿತ್ರದ ಮುಹೂರ್ತ ಸಮಾರಂಭದಲ್ಲಿ ರಾಜಕೀಯ ಹಾಗೂ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದರು. ಧ್ಯಾನ್ ಯೋಗೇಶ್ವರ್ ಅವರ ಸಿನಿ ಪಯಣ ಯಶಸ್ವಿಯಾಗಲಿ ಎಂದು ಶುಭಾಶಯಗಳು ವ್ಯಕ್ತವಾಗಿದ್ದು, ಕಾರ್ಯಕ್ರಮವು ಗಮನ ಸೆಳೆಯಿತು.

ಇದನ್ನೂ ಓದಿ: ಅಪ್ರಾಪ್ತ ಬಾಲಕಿ ದೂರು: POCSO ಪ್ರಕರಣದಲ್ಲಿ PSI ಬಂಧನ!

ಚಿತ್ರರಂಗದಲ್ಲಿ ಹೊಸ ಅಧ್ಯಾಯ : ರಾಜಕೀಯ ಮತ್ತು ಚಿತ್ರರಂಗ ಎರಡರಲ್ಲೂ ತಮ್ಮದೇ ಛಾಪು ಮೂಡಿಸಿರುವ ಸಿ.ಪಿ. ಯೋಗೇಶ್ವರ್ ಕುಟುಂಬದಿಂದ ಮತ್ತೊಬ್ಬ ನಟನ ಆಗಮನವಾಗುತ್ತಿರುವುದು ವಿಶೇಷವಾಗಿದೆ. ಧ್ಯಾನ್ ಯೋಗೇಶ್ವರ್ ಅವರ ಮೊದಲ ಸಿನಿಮಾ ಹಾಗೂ ಸಿ.ಪಿ. ಯೋಗೇಶ್ವರ್ ಅವರ ಕಮ್‌ಬ್ಯಾಕ್ ಚಿತ್ರಗಳ ಬಗ್ಗೆ ಈಗಾಗಲೇ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಾಗಿದೆ.