ಮಾನ್ವಿ: ಮಹಿಳೆಯೊಬ್ಬರ ಗಮನ ಬೇರೆಡೆ ಸೆಳೆದು ಅವರ ಚೀಲದಲ್ಲಿದ್ದ 1.50 ಲಕ್ಷ ಹಣವನ್ನು ಕಳ್ಳತನ ಮಾಡಿರುವ ಘಟನೆ ಪಟ್ಟಣ ಜಿ.ಜಿ ಕಾಂಪ್ಲೆಕ್ಸ್‌ನ ಕಿರಾಣಿ ಅಂಗಡಿಯ
ಮುಂಭಾಗದಲ್ಲಿ ಬುಧವಾರ ನಡೆದಿದೆ.
ಕೋನಾಪುರಪೇಟೆ ಬಡಾವಣೆಯ ಮಹಿಳೆಯೇ ಹಣ ಕಳೆದುಕೊಂಡಿದ್ದಾರೆ. ಅವರು ಸ್ಥಳೀಯ ಬ್ಯಾಂಕ್‌ನಿಂದ 1.50 ಲಕ್ಷ ರೂ. ಹಣ ಡ್ರಾ ಮಾಡಿಕೊಂಡು ಜಿ.ಜಿ. ಕಾಂಪ್ಲೆಕ್ಸ್ ಅಂಗಡಿಗೆ ಬಂದಿದ್ದರು.
ಆ ಸಂದರ್ಭದಲ್ಲಿ ಅವರ ಗಮನ ಬೇರೆಡೆ ಸೆಳೆದು ಚೀಲದಲ್ಲಿದ್ದ ಹಣವನ್ನು ಮಹಿಳೆಯೊಬ್ಬಳು(ಕಳ್ಳಿ) ಕಳವು ಮಾಡಿ ಪರಾರಿಯಾಗಿದ್ದಾರೆ. ಬ್ಯಾಂಕ್‌ನಿಂದಲೇ ಮಹಿಳೆಯನ್ನು ಹಿಂಬಾಲಿಸಿಕೊಂಡು ಬಂದಿದ್ದ ಕಳ್ಳರು ಸೂಕ್ತ ಸಮಯಕ್ಕಾಗಿ ಕಾದು ಈ ಕೃತ್ಯವೆಸಗಿದ್ದಾಳೆ. ಈ ಎಲ್ಲ ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.






















