SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಹರಿಹರದಲ್ಲಿ ಶಂಕಿತ ಉಗ್ರನ ಬಂಧನ

ಹರಿಹರದಲ್ಲಿ ಶಂಕಿತ ಉಗ್ರನ ಬಂಧನ

0
237
ಯುವತಿಗೆ ಕಿರುಕುಳ ಆರೋಪ, ಬಳಿಕ ಹಲ್ಲೆ ಪ್ರಕರಣ; ನವನಗರ ಪೊಲೀಸರ ಕ್ರಮಕ್ಕೆ ಕುಟುಂಬಸ್ಥರ ಪ್ರಶ್ನೆ

ದಾವಣಗೆರೆ: ಪಾಕಿಸ್ತಾನದ ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಶಂಕಿತ ಉಗ್ರನೊಬ್ಬನನ್ನು ಹರಿಹರದಲ್ಲಿ ಮಂಗಳವಾರ ಕೇಂದ್ರ ಗುಪ್ತಚರ ಇಲಾಖೆ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಮೂಲತಃ ಉತ್ತರ ಪ್ರದೇಶದ ಸುಹೇಲ್ (20) ಬಂಧಿತ ಶಂಕಿತ ಉಗ್ರ. ಕಳೆದ 15 ದಿನಗಳ ಹಿಂದೆಯಷ್ಟೇ ಸುಹೇಲ್ ಹರಿಹರ ಸಮೀಪದ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದನು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಂತಹ ಗುಪ್ತಚರ ಇಲಾಖೆ ಅಧಿಕಾರಿಗಳು ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಸುಹೇಲ್‌ನನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಶಂಕಿತ ಉಗ್ರ ಸುಹೇಲ್ ಇನ್‌ಸ್ಟಾಗ್ರಾಮ್‌ನಲ್ಲಿ ಪಾಕಿಸ್ತಾನದ ಉಗ್ರರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದ ಎನ್ನಲಾಗುತ್ತಿದೆ. ಇನ್‌ಸ್ಟಾಗ್ರಾಮ್ ಮೇಲೆ ನಿಗಾವಹಿಸಿದ್ದ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಹಾಗೂ ಹರಿಹರ ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಿ, ಬಂಧಿಸಿದ್ದಾರೆ.‌

ಜೂನ್ 5ರಂದು ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ತುಮಕೂರು ಪೊಲೀಸರು ದಾವಣಗೆರೆಯ ಬೀಡಿ ಲೇಔಟ್ ನಿವಾಸಿ ಜಮೀರ್‌ಖಾನ್ ಎಂಬುವನನ್ನು ಬಂಧಿಸಿದ್ದರು. ಅದೇ ದಿನ ತುಮಕೂರಿನಲ್ಲಿ ಅಲ್ಲಾಭಕ್ಷಿ ಎಂಬುವನನ್ನೂ ಬಂಧಿಸಿದ್ದರು. ಅದೇ ಪ್ರಕರಣ ಜಾಡು ಹಿಡಿದು ಹರಿಹರದಲ್ಲಿ ಮತ್ತೊಬ್ಬ ಶಂಕಿತ ಉಗ್ರನ ಬಂಧಿಸಿದ್ದಾರೆ. ಪಾಕಿಸ್ತಾನದ ಉಗ್ರರ ಜತೆ ನಂಟು ಹೊಂದಿದ್ದ ಎನ್ನಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.