SK Home Ad
Home ಸುದ್ದಿ ರಾಜ್ಯ ಪರಿಷತ್‌ ಚುನಾವಣೆ: ಕಾಂಗ್ರೆಸ್‌ನ ಐವರಿಗೆ, ಬಿಜೆಪಿಯ ಇಬ್ಬರಿಗೆ ಜಯ

ಪರಿಷತ್‌ ಚುನಾವಣೆ: ಕಾಂಗ್ರೆಸ್‌ನ ಐವರಿಗೆ, ಬಿಜೆಪಿಯ ಇಬ್ಬರಿಗೆ ಜಯ

0
218

ಬೆಂಗಳೂರು: ವಿಧಾನ ಪರಿಷತ್​​ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್​​ನ ಐವರು ಮತ್ತು ಬಿಜೆಪಿಯ ಎರಡು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಯಾರಿಗೆ ಎಷ್ಟು ಮತ?: ಕಾಂಗ್ರೆಸ್ ಅಭ್ಯರ್ಥಿಗಳಾದ ವಿನಯ್ ಕಾರ್ತಿಕ್​ 32 ಮತ, ಬಿ.ಕೆ. ಹರಿಪ್ರಸಾದ್​​ 30 ಮತ, ತಿಪ್ಪಣ್ಣಪ್ಪ ಕಮಕನೂರು 30 ಮತ, ಬಿ.ಎಸ್. ಶಿವಣ್ಣ 30 ಮತ, ಪಿ.ವಿ. ಮೋಹನ್ 29 ಮತಗಳನ್ನು ಪಡೆದಿದ್ದಾರೆ.

ಬಿಜೆಪಿ ಅಭ್ಯರ್ಥಿಗಳಾದ ಆರ್. ರಘು 29 ಮತಗಳನ್ನು ಪಡೆದಿದ್ದರೆ, ಇನ್ನೋರ್ವ ಅಭ್ಯರ್ಥಿ ಲಿಂಗರಾಜ್ ಪಾಟೀಲ್​‌ 27 ಮತಗಳನ್ನು ಪಡೆದಿದ್ದಾರೆ. ಇನ್ನು ಪರಾಜಿತ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರು 14 ಮತಗಳನ್ನು ಪಡೆದಿದ್ದಾರೆ.

ನಿರೀಕ್ಷೆಯಂತೆ ಕಾಂಗ್ರೆಸ್‌ನ ನಾಲ್ವರು, ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ನ ಐದನೇ ಅಭ್ಯರ್ಥಿ ಫಲಿತಾಂಶ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ, ಅಡ್ಡಮತದಾನ ಪರಿಣಾಮವಾಗಿ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಸೋಲು ಕಂಡಿದ್ದು, ಕಾಂಗ್ರೆಸ್‌ನ ವಿನಯ್ ಕಾರ್ತಿಕ್ ಐದನೇ ಅಭ್ಯರ್ಥಿಯಾಗಿ ಜಯ ದಾಖಲಿಸಿದ್ದು, ಎನ್‌ಡಿಎಗೆ ತೀವ್ರ ಮುಖಭಂಗವಾಗಿದೆ.

ಲಿಂಗರಾಜ್ ಪಾಟೀಲ್​ಗೆ ಗೆಲುವು: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್​ಗೆ 11 ಹೆಚ್ಚುವರಿ ಮತಗಳು ದೊರೆತಿವೆ. ಹೀಗಾಗಿ ಲಿಂಗರಾಜ್ ಪಾಟೀಲ್‌ ಅವರು ಗೆಲುವಿನ ಬೇಕಾದ ಮತಗಳನ್ನು ಪಡೆದಿರಲಿಲ್ಲ. ಅಭ್ಯರ್ಥಿ ಗೆಲುವಿಗೆ 27.63 ಮತ ಅವಶ್ಯವಿದ್ದು, ಲಿಂಗರಾಜ್ ಪಾಟೀಲ್​‌ ಅವರು ಕೇವಲ 27 ಮತ ಪಡೆದಿದ್ದರು. ಜೆಡಿಎಸ್​ನ ಗೋವಿಂದರಾಜು 14 ಮತ ಪಡೆದಿದ್ದ ಹಿನ್ನೆಲೆ ಎಲಿಮಿನೇಷನ್ ರೌಂಡ್​ನಲ್ಲಿ ಲಿಂಗರಾಜ್ ಪಾಟೀಲ್​ಗೆ ಜಯ ಸಿಕ್ಕಿದೆ.

ಒಂದು ಮತ ಅಸಿಂಧು: ಚಲಾವಣೆಗೊಂಡಿದ್ದ 222 ಮತಗಳ ಪೈಕಿ ಒಂದು ಮತವನ್ನು ಸಂಖ್ಯೆ ಸರಿಯಾಗಿ ಬರೆಯದಿರುವ ಕಾರಣದಿಂದ ಅಸಿಂಧುಗೊಳಿಸಲಾಗಿದೆ.