SK Home Ad
Home ಆಹಾರ ಬೆಲೆ ಏರಿಕೆಗೆ ತತ್ತರಿಸುವ ಬಡವರಿಗೆ ನಿಟ್ಟುಸಿರು.. ಅಕ್ಕಿ ದರ ಕ್ವಿಂಟಾಲ್ ಗೆ 2000 ರೂ.ಇಳಿಕೆ; ಸೋನಾ...

ಬೆಲೆ ಏರಿಕೆಗೆ ತತ್ತರಿಸುವ ಬಡವರಿಗೆ ನಿಟ್ಟುಸಿರು.. ಅಕ್ಕಿ ದರ ಕ್ವಿಂಟಾಲ್ ಗೆ 2000 ರೂ.ಇಳಿಕೆ; ಸೋನಾ ಈಗ ಸಸ್ತಾ

0
79

ಸಾಲು ಸಾಲು ದಿನನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಸಾಮಾನ್ಯ ಜನರಿಗೆ  ಹೊಸ ಸೋನಾ ಮಸೂರಿ ಅಕ್ಕಿ ಬೆಲೆಯಲ್ಲಿ ಇಳಿಕೆಯಾಗಿ ಸಂತಸತಂದಿದೆ. ಆದರೆ ಕೆಲವು ತಿಂಗಳ ಹಿಂದೆ ಅಕ್ಕಿ ದರ  ಗಗನಕ್ಕೆ ಏರಿಕೆಯಾಗಿ, ದಿನನಿತ್ಯ ಅಕ್ಕಿ ಬಳಸುವ ಸಾಮನ್ಯ ಜನರು ಕಂಗಾಲಾಗಿ ಹೋಗಿದ್ದರು. ಹೊಸ ಸೋನಾ ಮಸೂರಿ  ದರ ಪ್ರತಿ ಕೆಜಿ ಅಕ್ಕಿ 15 ರಿಂದ 20 ಗೆ ದಿಢೀರ್  ಕುಸಿತವಾಗಿದೆ. 

ಸರತಿ ಸಾಲಿನಲ್ಲಿ ಇರುಳ್ಳಿ, ಸಕ್ಕರೆ,ಬೆಲ್ಲ ದರ ಏರಿಕೆಯಾದಾಗ ನಾಳೆ ಯಾವುದರ ಬೆಲೆ ಹೆಚ್ಚಾಗುತ್ತದೆ ಎಂದು ಚಿಂತಿಸಿದ ಜನರಿಗೆ ಅಕ್ಕಿ ಬೆಲೆ ಇಳಿಕೆಯಿಂದ ಸಂತಸ ತಂದಿದೆ. ಸೋನಾ ಮಸೂರಿ ಪ್ರತಿ ಕೆ.ಜಿ 80-90 ಕ್ಕೆ ಇದ್ದ ಬೆಲೆ ಈಗ 65-75 ಇಳಿಕೆಯಾಗಿ

ಕ್ವಿಂಟಾಲ್‌ ಗೆ  8500 ಇದ್ದ ದರ ಇಗ 6500 ರೂ. ಆಗಿದೆ ಅಂದರೆ ಪ್ರತಿ ಕ್ವಿಂಟಾಲ್‌ ಗೆ 2000 ರೂ. ಇಳಿದಿದೆ.

ಆದರೆ ಇನ್ನುಂದು ಚಿಂತೆ ಈ ಬೆಲೆ ಯಾವಾಗ ಅನ್ವಯವಾಗುವುದು? ಈಗಾಗಲೆ ಮಾರುಕಟ್ಟೆಯಲ್ಲಿ ಅಕ್ಕಿಯನ್ನು ತಂದು ಶೇಖರಿಸಿಟ್ಟಿರುವ ಮಳಿಗೆಯವರು, ಈ ದರ ಯಾವಾಗಿನಿಂದ ನೀಡಲಿದ್ದಾರೆ ಎಂಬುದು ಪ್ರಶ್ನೆ ಮೂಡಿದೆ.

ಅಕ್ಕಿ ದರ ಕುಸಿಯುವುಕ್ಕೆ ಕಾರಣ

ನೆರೆಯ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯದಲ್ಲಿ ಕಟಾವು ಕಾರ್ಯ ಪುರ್ಣಗೊಂಡಿದ್ದು, ಅಲ್ಲಿಂದ ರಾಯಚೂರಿನ ಅಕ್ಕಿ ಗಿರಣಿಗಳಿಗೆ ಭರಪುರ ಅಕ್ಕಿ ಹರಿದುಬರುತ್ತಿವೆ. ಕರ್ನಾಟಕದಲ್ಲಿ ಮುಂಗಾರಿನ ಹಂಗಾಮಿನಲ್ಲಿ ಬೆಳದಿದ್ದ ಭತ್ತ ಕಟಾವಗೆ ಬಂದಿಲ್ಲದ ಕಾರಣ ಅಕ್ಕಿ ದರ ಗಗನಕ್ಕೆ ಏರಿಕೆಯಾಗಿತ್ತು.

ಇದೆ ರೀತಿ ಇನ್ನು ದಿನಸಿ ಅಗತ್ಯೆ ವಸ್ತುಗಳ ಬಲೆಯಲ್ಲಿ ಇಳಿಕೆಯಾದರೆ ಬರಗಾಲದಲ್ಲಿ ಜನಸಾಮನ್ಯರ ಬದುಕಿಗೆ ತೊಂದರೆಯಾವುದಿಲ್ಲ.