SK Home Ad
Home ಅಪರಾಧ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಸಾವು

ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಸಾವು

0
1095
ಕಟ್ಟಡ ಕುಸಿದು ಸಾವು

ಬೆಂಗಳೂರು: ಕಟ್ಟಡವೊಂದು ಕುಸಿದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿ ಘಟನೆ ವೈಟ್ ಫೀಲ್ಡ್ ರಸ್ತೆಯ ಹೂಡಿ ಸಮೀಪದಲ್ಲಿ ನಡೆದಿದೆ. ಮೃತರನ್ನು ಬಿಹಾರದ ಜೈನುದ್ದೀನ್, ಹರಮಾನ್ ಎಂದು ಗುರುತಿಸಲಾಗಿದೆ. ಮೂರು ಮಂದಿಗೆ ಗಂಭೀರ ಗಾಯಗಳಾಗಿವೆ.
ಬಿಎಲ್‌ಆರ್ ಕಂಪನಿಗೆ ಸೇರಿದ ಹಳೆ ಕಟ್ಟಡ ಇದಾಗಿದ್ದು, ಅದರನ್ನು ತೆರವು ಮಾಡಲಾಗುತ್ತಿತ್ತು. ಕಟ್ಟಡ ಮೇಲಿನ ಕೆಲವು ಭಾಗಗಳನ್ನು ತೆರವು ಮಾಡಲಾಗಿದ್ದು, ಕೆಳಭಾಗ ಹಾಗೇ ಇತ್ತು. ಕೆಳಗಿನ ಭಾಗದ ಕೋಣೆಯಲ್ಲಿ ಕಾರ್ಮಿಕರು ಮಲಗಿದ್ದರು. ಈ ನಡುವೆ, ರಾತ್ರಿ ಸುರಿದ ಭಾರಿ ಮಳೆಯ ಬಳಿಕ ಕಟ್ಟಡ ಸಂಪೂರ್ಣ ಕುಸಿದು ಬಿದ್ದಿದೆ. ಆಗ ಕೆಳಗೆ ರೂಮಿನಲ್ಲಿ ಮಲಗಿ ಕಾರ್ಮಿಕರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.