SK Home Ad
Home ಕ್ರೀಡೆ RCBಗೆ ಹೊಸ ಬಾಸ್: ಐಪಿಎಲ್ ಇತಿಹಾಸದಲ್ಲೇ ಮಹಾ ತಿರುವು; ₹16,660 ಕೋಟಿಗೆ ಬಿಗ್ ಡೀಲ್! ಇಲ್ಲಿದೇ...

RCBಗೆ ಹೊಸ ಬಾಸ್: ಐಪಿಎಲ್ ಇತಿಹಾಸದಲ್ಲೇ ಮಹಾ ತಿರುವು; ₹16,660 ಕೋಟಿಗೆ ಬಿಗ್ ಡೀಲ್! ಇಲ್ಲಿದೇ ಡಿಟೇಲ್ಸ್

0
33

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಐತಿಹಾಸಿಕ ಒಪ್ಪಂದವೊಂದಕ್ಕೆ ಭಾರತೀಯ ಸ್ಪರ್ಧಾ ಆಯೋಗ (CCI) ಅಧಿಕೃತ ಗ್ರೀನ್ ಸಿಗ್ನಲ್ ನೀಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯ ಮಾಲೀಕತ್ವ ಹಸ್ತಾಂತರ ಪ್ರಕ್ರಿಯೆಗೆ ಜೂನ್ 30ರ ಮಂಗಳವಾರದಂದು ಸಿಸಿಐ ಅನುಮೋದನೆ ನೀಡಿದ್ದು, ಆರ್‌ಸಿಬಿ ತಂಡವು ಅಧಿಕೃತವಾಗಿ ಹೊಸ ಮಾಲೀಕರ ಕೈವಶಕ್ಕೆ ಸೇರಿದೆ.

ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ಒಡೆತನದಲ್ಲಿದ್ದ RCB ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಪ್ರಭಾವಿ ಉದ್ಯಮಿಗಳ ಒಕ್ಕೂಟವು ಭಾರಿ ಮೊತ್ತಕ್ಕೆ ಖರೀದಿಸಿದೆ. ₹16,660 ಕೋಟಿ ರೂಪಾಯಿಗಳ ಈ ಸಂಪೂರ್ಣ ನಗದು ಒಪ್ಪಂದದ (All-Cash Deal) ಪ್ರಕ್ರಿಯೆಯು ಐಪಿಎಲ್‌ನ 19 ವರ್ಷಗಳ ಇತಿಹಾಸದಲ್ಲೇ ಅತ್ಯಂತ ದುಬಾರಿ ವ್ಯವಹಾರ ಎಂದು ದಾಖಲಾಗಿದೆ. ಇತ್ತೀಚೆಗಷ್ಟೇ ಐಪಿಎಲ್ ಮತ್ತು ಡಬ್ಲ್ಯೂಪಿಎಲ್ ಎರಡರಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿದ್ದ RCB ತಂಡದ ಮೌಲ್ಯ ಈ ಒಪ್ಪಂದದಿಂದ ಗಗನಕ್ಕೇರಿದೆ.

ಹಾಗೇ ಈ ಬೃಹತ್ ಒಪ್ಪಂದದ ಅಡಿಯಲ್ಲಿ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್‌ನ ಶೇಕಡಾ 100ರಷ್ಟು ಷೇರುಗಳನ್ನು ವಿವಿಧ ಪ್ರಮುಖ ಸಂಸ್ಥೆಗಳನ್ನೊಳಗೊಂಡ ಒಕ್ಕೂಟ ಸ್ವಾಧೀನಪಡಿಸಿಕೊಂಡಿದೆ. ಇದರಲ್ಲಿ ಪ್ರಮುಖವಾಗಿ ಆದಿತ್ಯ ಬಿರ್ಲಾ ಗ್ರೂಪ್, ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ (ಟೈಮ್ಸ್ ಇಂಟರ್ನೆಟ್ / ಟೈಮ್ಸ್ ಕ್ರಿಕೆಟ್), ಬೋಲ್ಟ್ ವೆಂಚರ್ಸ್, ಜಾಗತಿಕ ಹೂಡಿಕೆ ಸಂಸ್ಥೆಯಾದ ಬ್ಲ್ಯಾಕ್‌ಸ್ಟೋನ್ ಸೇರಿದಂತೆ ಬಿಗ್ ಬನ್ಯನ್ ಹೋಲ್ಡಿಂಗ್ಸ್, ಐಸಿಕ್ಯೂ ಆಪರ್ಚುನಿಟೀಸ್ ಮತ್ತು ಏಷ್ಯಾ ಇನ್ವೆಸ್ಟ್‌ಮೆಂಟ್ ಟಾಪ್‌ಕೋ II ಕಂಪನಿಗಳು ಸಹ ಸೇರಿವೆ.

ಆರ್‌ಸಿಬಿಗೆ ಹೊಸ ನಾಯಕತ್ವ: ಮಾಲೀಕತ್ವ ಬದಲಾವಣೆಯ ಬೆನ್ನಲ್ಲೇ ಆರ್‌ಸಿಬಿ ತಂಡದ ಆಡಳಿತ ಮಂಡಳಿಯಲ್ಲೂ ಹೊಸ ಬದಲಾವಣೆಗಳಾಗಲಿವೆ. ಮಾಜಿ ವೃತ್ತಿಪರ ಕ್ರಿಕೆಟಿಗ ಹಾಗೂ ಆದಿತ್ಯ ಬಿರ್ಲಾ ಗ್ರೂಪ್‌ನ ನಿರ್ದೇಶಕರೂ ಆಗಿರುವ ಆರ್ಯಮನ್ ವಿಕ್ರಮ್ ಬಿರ್ಲಾ RCB ಫ್ರಾಂಚೈಸಿಯ ನೂತನ ಚೇರ್ಮನ್ ಆಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಹಾಗೆಯೇ ಟೈಮ್ಸ್ ಇಂಟರ್ನೆಟ್‌ನ ಸತ್ಯನ್ ಗಜ್ವಾನಿ, ವೈಸ್ ಚೇರ್ಮನ್ (Vice Chairman) ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಹೊಸ ನಾಯಕತ್ವವು ಕ್ರಿಕೆಟ್ ಪ್ರೇಮಿಗಳು ಹಾಗೂ ಆರ್‌ಸಿಬಿ (RCB) ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.