Home Advertisement
Home ಕ್ರೀಡೆ RCB ತಂಡದಲ್ಲಿ 2 ಬಿಗ್ ಚೇಂಜ್! ಡೆಲ್ಲಿ ವಿರುದ್ಧದ ಪಂದ್ಯದಿಂದ ಇಬ್ಬರು ಸ್ಟಾರ್ ಆಟಗಾರರು ಔಟ್

RCB ತಂಡದಲ್ಲಿ 2 ಬಿಗ್ ಚೇಂಜ್! ಡೆಲ್ಲಿ ವಿರುದ್ಧದ ಪಂದ್ಯದಿಂದ ಇಬ್ಬರು ಸ್ಟಾರ್ ಆಟಗಾರರು ಔಟ್

0
91

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಮೊದಲಾರ್ಧದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು  ತಂಡ, ಇದೀಗ ತನ್ನ ಮುಂದಿನ ಸವಾಲಿಗೆ ಸಜ್ಜಾಗಿದೆ. ಈವರೆಗೆ ಆಡಿರುವ 7 ಪಂದ್ಯಗಳಲ್ಲಿ 5 ಜಯ ಸಾಧಿಸಿ, 10 ಅಂಕಗಳೊಂದಿಗೆ ಬೀಗುತ್ತಿರುವ ಆರ್‌ಸಿಬಿ, ತನ್ನ 39ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಆರ್‌ಸಿಬಿ ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡುವುದು ಬಹುತೇಕ ಖಚಿತವಾಗಿದೆ. ತಂಡದ ಇಬ್ಬರು ಪ್ರಮುಖ ಆಟಗಾರರು ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿರುವುದೇ ಈ ಬದಲಾವಣೆಗೆ ಕಾರಣ.

ಗಾಯದ ಸಮಸ್ಯೆಯಿಂದ ಹೊರಗುಳಿದ ಇಬ್ಬರು ಯಾರು?: ಆರ್‌ಸಿಬಿಯ ಸ್ಫೋಟಕ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಅವರು ಗಾಯದ ಸಮಸ್ಯೆಗೆ ತುತ್ತಾಗಿದ್ದು, ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

ತಂಡದ ಪ್ರಮುಖ ವೇಗದ ಬೌಲರ್ ರಾಸಿಖ್ ದಾರ್ ಕೂಡ ಸ್ನಾಯು ಸೆಳೆತದಿಂದ ಬಳಲುತ್ತಿದ್ದು, ಈ ಪಂದ್ಯದಿಂದ ಹೊರಗುಳಿಯುವುದು ಖಚಿತವಾಗಿದೆ.

ಬದಲಿ ಆಟಗಾರರು ಯಾರು?: ಫಿಲ್ ಸಾಲ್ಟ್ ಅಲಭ್ಯತೆಯಿಂದಾಗಿ ಅವರ ಸ್ಥಾನಕ್ಕೆ ಜೇಕಬ್ ಬೆಥೆಲ್ ಎಂಟ್ರಿ ಕೊಡುವುದು ಪಕ್ಕಾ ಆಗಿದೆ. ಕಳೆದ ಪಂದ್ಯದಲ್ಲೂ ಆರಂಭಿಕರಾಗಿ ಕಣಕ್ಕಿಳಿದಿದ್ದ ಬೆಥೆಲ್, ಈ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಆದರೆ, ಬೌಲಿಂಗ್ ವಿಭಾಗದಲ್ಲಿ ರಾಸಿಖ್ ದಾರ್ ಜಾಗಕ್ಕೆ ಯಾರನ್ನು ಕರೆತರಬೇಕು ಎಂಬುದು ಮ್ಯಾನೇಜ್‌ಮೆಂಟ್‌ಗೆ ತಲೆನೋವಾಗಿದೆ. ತಂಡದಲ್ಲಿ ಅನುಭವಿ ವೇಗಿಗಳ ಕೊರತೆ ಎದ್ದುಕಾಣುತ್ತಿದೆ. ಈಗಾಗಲೇ ಅಭಿನಂದನ್ ಸಿಂಗ್‌ಗೆ ಅವಕಾಶ ನೀಡಿದ್ದರೂ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಹೀಗಾಗಿ, ಯುವ ವೇಗಿ ಮಂಗೇಶ್ ಯಾದವ್ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರೂ ಅಚ್ಚರಿಯಿಲ್ಲ.

ಡೆಲ್ಲಿ ವಿರುದ್ಧ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಹೀಗಿದೆ:

ವಿರಾಟ್ ಕೊಹ್ಲಿ

ಜೇಕಬ್ ಬೆಥೆಲ್

ದೇವದತ್ ಪಡಿಕ್ಕಲ್

ರಜತ್ ಪಾಟಿದಾರ್ (ನಾಯಕ)

ಟಿಮ್ ಡೇವಿಡ್

ಜಿತೇಶ್ ಶರ್ಮಾ

ಕೃನಾಲ್ ಪಾಂಡ್ಯ

ರೊಮಾರಿಯೊ ಶೆಫರ್ಡ್

ಜೋಶ್ ಹೇಝಲ್‌ವುಡ್

ಭುವನೇಶ್ವರ್ ಕುಮಾರ್

ಮಂಗೇಶ್ ಯಾದವ್

ಇಂಪ್ಯಾಕ್ಟ್ ಪ್ಲೇಯರ್: ಸುಯಶ್ ಶರ್ಮಾ