SK Home Ad
Home ಕ್ರೀಡೆ IPL 2026: ಗುಜರಾತ್‌ಗೆ 165 ರನ್‌ ಟಾರ್ಗೆಟ್‌ ನೀಡಿದ ಲಖನೌ

IPL 2026: ಗುಜರಾತ್‌ಗೆ 165 ರನ್‌ ಟಾರ್ಗೆಟ್‌ ನೀಡಿದ ಲಖನೌ

0
205

ಲಖನೌ: ಪ್ರಸಿದ್ಧ ಕೃಷ್ಣ ಅತ್ಯುತ್ತಮ ಬೌಲಿಂಗ್‌ ದಾಳಿಯ ಹೊರತಾಗಿಯೂ ಲಖನೌ ಸೂಪರ್ ಜೈಂಟ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಸವಾಲಿನ ಮೊತ್ತವನ್ನು ಕಲೆಹಾಕಿದೆ.

ಲಖನೌ ಸೂಪರ್ ಜೈಂಟ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 164 ರನ್ನು ಗಳಿಸಿತು.

ಟಾಸ್‌ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಗುಜರಾತ್ ಟೈಟಾನ್ಸ್ ಅಂದುಕೊಂಡಂತೆ ಆರಂಭದಲ್ಲಿಯೇ ಮಿಚೆಲ್ ಮಾರ್ಷ್ (11) ವಿಕೆಟ್‌ ಉರುಳಿಸಿತು.

ಐಡೆನ್ ಮಾರ್ಕ್ರಾಮ್ (30) ಹೊರತುಪಡಿಸಿದರೆ ಯಾವೊಬ್ಬ ಆಟಗಾರನಿಗೂ ವೈಯಕ್ತಿಕ 20 ರನ್‌ಗಳ ಗಡಿ ದಾಟಲು ಬಿಡದೆ ಕಟ್ಟಿಹಾಕುವಲ್ಲಿ ಬೌಲರ್‌ಗಳು ಯಶ ಕಂಡರು.

ಗುಜರಾತ್‌ ಪರ ಪ್ರಸಿದ್ಧ ಕೃಷ್ಣ 28ಕ್ಕೆ 4 ವಿಕೆಟ್‌, ಅಶೋಕ ಶರ್ಮಾ 32ಕ್ಕೆ 2 ಹಾಗೂ ಮೊಹಮ್ಮದ ಸಿರಾಜ್‌, ಕಗಿಸೋ ರಬಾಡ ತಲಾ ಒಂದು ವಿಕೆಟ್‌ ಪಡೆದರು.