ಬೆಂಗಳೂರು: ಕಳೆದ 12 ದಿನದಿಂದ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಇಂದು ಬ್ರೇಕ್ ಸಿಕ್ಕಿದೆ, ಸಿಎಂ ಡಿ.ಕೆ.ಶಿವಕುಮಾರ್ ಅವರು ಆಶಾಗಳ 2000 ರೂ ವೇತನ ಹೆಚ್ಚಳ ಮಾಡುವುದಾಗಿ ಮನವೊಲಿಸಿದ್ದಾರೆ. ಅಧಿವೇಶದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿವುದು ಎಂದು ತಿಳಿಸಿದರು. ಈ ಮೂಲಕ ಆಶಾ ಕಾರ್ಯರ್ತೆಯರ ಸಂಧಾನ ಸಕ್ಸಸ್ ಸಿಕ್ಕಿದೆ.
ಇಂದು ಬೆಳ್ಳಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಜೋತೆ ಆಶಾ ನಿಯೋಗದ ನಡೆದ ಸಭೆಯಲ್ಲಿ2000 ರೂ. ಹೆಚ್ಚಳ ಮಾಡುವುದಾಗಿ ತಿಳಿಸದಾಗ ಆಶಾ ನಿಯೋಗ ನಿರಾಕರಿಸಿ ಹೋರಾಟ ಮುಂದುವರೆಸಿದರು.
ಮಧ್ಯಾಹ್ನ 3 ಗಂಟೆಯ ಮತ್ತೊಂದು ಸುತ್ತಿನ ಸಭೆಯಲ್ಲಿ ಸಿಎಂ ಆಶಾ ಸಂಧಾನದಲ್ಲಿ ಆಶಾ ಕಾರ್ಯರ್ತೆಯರು ನಮ್ಮ ಮನೆಯ ಸಹೋದರಿಯರು ಅವರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ, ಅವರ ಕುಟುಂಬದ ಜೊತೆ ಅವರು ಎಲ್ಲರ ಆರೋಗ್ಯದ ಕಾಳಜಿ ವಹಿಸುತ್ತಾರೆ, ಅವರಿಗೆ ವೇತನ ಹೆಚ್ಚಳ ಮಾಡುವುದು ನಮ್ಮದು ಅಷ್ಟೆ ಅಲ್ಲ ಬದಲಿಗೆ ಕೇಂದ್ರ ಸರ್ಕಾರದು ಕಾರ್ಯವಾಗಿದೆ ನಾವು ಅವರ ಗಮನಕ್ಕೂ ತರುತ್ತೇವೆ ಎಂದು ತಿಳಿಸಿ 2000 ರೂ. ಹೆಚ್ಚಳ ಮಾಡ್ತಿವಿ ಜನವರಿ 1 ರಿಂದ ಈ ವೇತನ ಹೆಚ್ಚಳ ಜಾರಿಯಾಗುವುದು ಎಂದು ತಿಳಿಸಿದರು.
ಈ 2000 ರೂ ವೇತನ ಹೆಚ್ಚಳಕ್ಕೆ ಆಶಾ ಕಾರ್ಯರ್ತೆಯರ ಸಂಘಟನೆಯ ಅಧ್ಯಕ್ಷೆ ನಾಗಲಕ್ಷ್ಮೀ ಒಪ್ಪಿಕೊಂಡು ಪ್ರತಿಭಟನೆ ಇಲ್ಲಿಗೆ ಕೈಬಿಡುವುದಾಗಿ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಸನ್ಮಾನಿಸಿದರು.
ಮೊದಲು ಆಶಾ ಕಾರ್ಯರ್ತೆಯರಿಗೆ 7000 ರೂ ಮಾಸಿಕ ವೇತನವಿತ್ತು ಈದಿಗ 2000 ರೂ ಸರ್ಕಾರ ಹೆಚ್ಚಳ ಮಾಡಿದೆ. ಇದರೊಂದಿಗೆ ಆಶಾ ಕಾರ್ಯಕರ್ತಯರಿಗೆ ಮನವೊಲಿಸುವಲ್ಲಿ ಸಿಎಂ ಡಿಕೆ ಸಕ್ಸಸ್ ಆಗಿದ್ದಾರೆ.





















