Home Advertisement
Home ಕ್ರೀಡೆ CSK ಗೆದ್ದರೆ RCBಗೆ ಲಾಟರಿ ಟಾಪ್-2 ಸ್ಥಾನಕ್ಕೆ ಸಿಗುತ್ತಾ ಟಿಕೆಟ್: ಇವತ್ತಿನ ಮ್ಯಾಚ್ ಮೇಲೆ ಆರ್ಸಿಬಿ...

CSK ಗೆದ್ದರೆ RCBಗೆ ಲಾಟರಿ ಟಾಪ್-2 ಸ್ಥಾನಕ್ಕೆ ಸಿಗುತ್ತಾ ಟಿಕೆಟ್: ಇವತ್ತಿನ ಮ್ಯಾಚ್ ಮೇಲೆ ಆರ್ಸಿಬಿ ಫ್ಯಾನ್ಸ್ ಕಣ್ಣು; ಏನಿದು ಅಸಲಿ ಲೆಕ್ಕಾಚಾರ?

0
65

ಐಪಿಎಲ್ 2026 ಈಗ ಅಕ್ಷರಶಃ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಇವತ್ತು ಒಂದು ವಿಚಿತ್ರ ಸನ್ನಿವೇಶ ನಡೆದಿಯುವದಿದೆ ನೋಡಿ. ಸಾಮಾನ್ಯವಾಗಿ ಆರ್‌ಸಿಬಿ ಮತ್ತು ಸಿಎಸ್‌ಕೆ ಅಭಿಮಾನಿಗಳು ಮೈದಾನದಲ್ಲಿ ಕಿತ್ತಾಡಿಕೊಳ್ಳೋದನ್ನ ನಾವು ನೋಡಿದ್ದೇವೆ.

ಆದ್ರೆ ಇವತ್ತು ಮಾತ್ರ ಆರ್‌ಸಿಬಿ ಫ್ಯಾನ್ಸ್ ಎಲ್ಲರೂ ಸಿಎಸ್‌ಕೆ ಗೆಲ್ಲಲಿ ಅಂತ ಹಾರೈಸ್ತಿದ್ದಾರೆ! ಯಾಕೆ ಗೊತ್ತಾ? ಇವತ್ತು ಸಿಎಸ್‌ಕೆ ಗೆದ್ದರೆ ಅದು ಆರ್‌ಸಿಬಿಗೆ ಲಾಟರಿ ಹೊಡೆದಂತೆ! ಅಸಲಿ ಲೆಕ್ಕಾಚಾರ ಏನು ಅಂತ ಹೇಳ್ತೀನಿ ಕೇಳಿ.

ಟಾಪ್-2 ಸ್ಥಾನದ ಮಹತ್ವ: ಆರ್‌ಸಿಬಿ ಈಗಾಗ್ಲೇ ಪ್ಲೇಆಫ್‌ಗೆ ಹೋಗಿರೋ ಏಕೈಕ ತಂಡ ಅನ್ನೋದು ನಮಗೆಲ್ಲಾ ಗೊತ್ತಿದೆ. ಆದ್ರೆ ಬರಿ ಪ್ಲೇಆಫ್ ಹೋದ್ರೆ ಸಾಲದು, ನಮಗೆ ‘ಟಾಪ್-2’ ಸ್ಥಾನ ಬೇಕು. ಯಾಕಂದ್ರೆ ಟಾಪ್-2 ನಲ್ಲಿ ಇದ್ರೆ ನಮಗೆ ಫೈನಲ್‌ಗೆ ಹೋಗೋಕೆ ಎರಡು ಚಾನ್ಸ್ ಸಿಗುತ್ತೆ. ಮೊದಲ ಕ್ವಾಲಿಫೈಯರ್‌ನಲ್ಲಿ ಗೆದ್ದರೆ ನೇರ ಫೈನಲ್, ಸೋತರೂ ಎಲಿಮಿನೇಟರ್‌ನಲ್ಲಿ ಗೆದ್ದ ತಂಡದ ಜೊತೆ ಮತ್ತೊಮ್ಮೆ ಆಡಬಹುದು. ಹಾಗಾಗಿ ಟಾಪ್-2 ಸ್ಥಾನ ಭದ್ರಪಡಿಸಿಕೊಳ್ಳೋದು ಆರ್‌ಸಿಬಿಗೆ ಇವತ್ತಿನ ಅತಿದೊಡ್ಡ ಗುರಿ.

ಇವತ್ತಿನ ಮ್ಯಾಚ್ ಮತ್ತು ಆರ್‌ಸಿಬಿ ಕನೆಕ್ಷನ್: ಈಗ ಅಸಲಿ ವಿಷಯಕ್ಕೆ ಬರೋಣ. ಇವತ್ತು ಚೆನ್ನೈನ ಚೆಪಾಕ್ ಮೈದಾನದಲ್ಲಿ ಸಿಎಸ್‌ಕೆ ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ಮುಖಾಮುಖಿಯಾಗ್ತಿವೆ. ಒಂದು ವೇಳೆ ಇವತ್ತು ಸಿಎಸ್‌ಕೆ ಗೆದ್ದರೆ, ಹೈದರಾಬಾದ್ ಪಾಯಿಂಟ್ಸ್ 14 ರಲ್ಲೇ ಉಳಿಯುತ್ತೆ. ಅವರು ಕೊನೆಯ ಮ್ಯಾಚ್ ಗೆದ್ದರೂ 16 ಪಾಯಿಂಟ್ಸ್‌ಗೆ ಮಾತ್ರ ತಲುಪೋಕೆ ಸಾಧ್ಯ.

ಅವತ್ತು ಏನಾಗುತ್ತೆ ಅಂದ್ರೆ, 18 ಪಾಯಿಂಟ್ಸ್ ಹೊಂದಿರೋ ನಮ್ಮ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಅಧಿಕೃತವಾಗಿ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನವನ್ನ ಫಿಕ್ಸ್ ಮಾಡಿಕೊಳ್ಳುತ್ತವೆ. ಅಂದ್ರೆ ಆರ್‌ಸಿಬಿ ತನ್ನ ಕೊನೆಯ ಮ್ಯಾಚ್ ಆಡೋ ಮೊದಲೇ ಮೊದಲ ಕ್ವಾಲಿಫೈಯರ್ ಪಂದ್ಯವನ್ನ ಆಡೋದು ಕನ್ಫರ್ಮ್ ಆಗುತ್ತೆ!

ಸಿಎಸ್‌ಕೆ ಸೋತರೆ ಏನಾಗುತ್ತೆ?:  ಒಂದು ವೇಳೆ ಇವತ್ತು ಸನ್‌ರೈಸರ್ಸ್ ಗೆದ್ದುಬಿಟ್ರೆ, ಅವರು 16 ಪಾಯಿಂಟ್‌ಗೆ ಬರ್ತಾರೆ. ಆಗ ಆರ್‌ಸಿಬಿಗೆ ಸ್ವಲ್ಪ ಟೆನ್ಶನ್ ಶುರುವಾಗುತ್ತೆ. ಯಾಕಂದ್ರೆ ಟಾಪ್-2 ನಲ್ಲಿ ಇರೋಕೆ ನಮ್ಮ ಕೊನೆಯ ಲೀಗ್ ಮ್ಯಾಚ್‌ನಲ್ಲಿ ಹೈದರಾಬಾದ್ ವಿರುದ್ಧ ನಾವು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗುತ್ತೆ. ಹಾಗಾಗಿ ಆ ರಿಸ್ಕ್ ಬೇಡ ಅಂದ್ರೆ ಇವತ್ತು ಸಿಎಸ್‌ಕೆ ಗೆಲ್ಲೋದು ಆರ್‌ಸಿಬಿ ಪಾಲಿಗೆ ದೊಡ್ಡ ಪ್ಲಸ್ ಪಾಯಿಂಟ್.