SK Home Ad
Home ತಾಜಾ ಸುದ್ದಿ ಮೆದುಳು ಜ್ವರಕ್ಕೆ ಶಾಲಾ ವಿದ್ಯಾರ್ಥಿನಿ ಬಲಿ

ಮೆದುಳು ಜ್ವರಕ್ಕೆ ಶಾಲಾ ವಿದ್ಯಾರ್ಥಿನಿ ಬಲಿ

0
140

ತ್ರೋಬಾಲ್‌ ಆಟಗಾರ್ತಿ, ಉತ್ತಮ ನೃತ್ಯಪಟುವೂ ಆಗಿದ್ದ ಸ್ವಸ್ತಿ ಶೆಟ್ಟಿ

ಮೂಡುಬಿದಿರೆ: ಮೆದುಳು ಜ್ವರ ಉಲ್ಬಣಗೊಂಡ ಪ್ರೌಢ ಶಾಲಾ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಮೂಡುಬಿದಿರೆಯ ಶಿರ್ತಾಡಿಯ ವಿದ್ಯಾರ್ಥಿನಿ ಸ್ವಸ್ತಿ ಶೆಟ್ಟಿ (15) ಮೃತಪಟ್ಟ ವಿದ್ಯಾರ್ಥಿಯಾಗಿದ್ದು ಶಿರ್ತಾಡಿ ಮೌಂಟ್‌ ಕಾರ್ಮೆಲ್‌ ಹೈಸ್ಕೂಲ್‌ನ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಳು.
ತ್ರೋಬಾಲ್‌ ಆಟಗಾರ್ತಿಯಾಗಿದ್ದ ಸ್ವಸ್ತಿ ಶೆಟ್ಟಿ ಉತ್ತಮ ನೃತ್ಯಪಟುವೂ ಆಗಿದ್ದರು. ತಂದೆ ಸತೀಶ್‌ ಶೆಟ್ಟಿ ಗೋವಾದಲ್ಲಿ ಉದ್ಯೋಗದಲ್ಲಿದ್ದು ತಾಯಿ ಸರಿತಾ ಶೆಟ್ಟಿ ಶಿರ್ತಾಡಿ ನವಮೈತ್ರಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಉದ್ಯೋಗಿಯಾಗಿದ್ದಾರೆ.