SK Home Ad
Home ತಾಜಾ ಸುದ್ದಿ ನಿಂತಿದ್ದ ರೈಲು ಬೋಗಿ ಬಿದ್ದು ನಾಲ್ವರು ಸಾವು

ನಿಂತಿದ್ದ ರೈಲು ಬೋಗಿ ಬಿದ್ದು ನಾಲ್ವರು ಸಾವು

0
209

ಸರಕು ಸಾಗಣೆ ರೈಲಿನ ಬೋಗಿಗಳು ನಿಂತಿದ್ದ ಜನರ ಮೇಲೆ ಬಿದ್ದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಒಡಿಶಾದ ಜಾಜ್‌ಪುರ ರಸ್ತೆ ರೈಲು ನಿಲ್ದಾಣದ ಬಳಿ ನಡೆದಿದೆ.
ಗುಡುಗು ಸಹಿತ ಮಳೆಯಾಗುತ್ತಿದ್ದ ಕಾರಣ ಆಶ್ರಯಕ್ಕಾಗಿ ಬೋಗಿಗಳ ಬಳಿ ಜನ ಬಂದು ನಿಂತಿದ್ದರು. ಈ ವೇಳೆ ಇಂಜಿನ್ ಇಲ್ಲದೆ ನಿಂತಿದ್ದ ಸರಕು ಸಾಗಣೆ ರೈಲಿನ ಬೋಗಿಗಳು ಚಂಡಮಾರುತಕ್ಕೆ ಉರುಳಿ ಬಿದ್ದಿರಬಹುದು ಎನ್ನಲಾಗಿದೆ. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.