Home Advertisement
Home ಸುದ್ದಿ ದೇಶ ಜನಪ್ರಿಯ ರೇಡಿಯೋ ನಿರೂಪಕ ಅಮೀನ್ ಸಯಾನಿ ನಿಧನ

ಜನಪ್ರಿಯ ರೇಡಿಯೋ ನಿರೂಪಕ ಅಮೀನ್ ಸಯಾನಿ ನಿಧನ

0
129

ನವದೆಹಲಿ: ಆಕಾಶವಾಣಿಯ ಜನಪ್ರಿಯ ಕಾರ್ಯಕ್ರಮ ‘ಬಿನಾಕಾ ಗೀತ್ ಮಾಲಾ’ ರೇಡಿಯೊ ನಿರೂಪಕ ಅಮೀನ್ ಸಯಾನಿ ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 91 ವರ್ಷ. ಸಯಾನಿ ಅವರ ಮಗ ರಾಜಿಲ್ ಸಯಾನಿ ಅವರು ತಮ್ಮ ತಂದೆಯ ಸಾವಿನ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಮಂಗಳವಾರ ರಾತ್ರಿ ಅವರ ತಂದೆಗೆ ಹೃದಯಾಘಾತವಾಯಿತು, ನಂತರ ಅವರನ್ನು ಮುಂಬೈನ ಎಚ್‌ಎನ್ ರಿಲಯನ್ಸ್ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಕೊನೆಯುಸಿರೆಳೆದರು ಎಂದು ಹೇಳಿದ್ದಾರೆ. ಸಯಾನಿ ಅವರ ಅಂತ್ಯಕ್ರಿಯೆ ಗುರುವಾರ ನಡೆಯಲಿದೆ.

ಅಮೀನ್ ಸಯಾನಿ 21 ಡಿಸೆಂಬರ್ 1932 ರಂದು ಮುಂಬೈನಲ್ಲಿ ಜನಿಸಿದರು. ಮುಂಬೈನ ಆಲ್ ಇಂಡಿಯಾ ರೇಡಿಯೊದಿಂದ ರೇಡಿಯೊ ನಿರೂಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 10 ವರ್ಷಗಳ ಕಾಲ ಇಲ್ಲಿ ಇಂಗ್ಲಿಷ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇದಾದ ನಂತರ ಭಾರತದಲ್ಲಿ ಆಲ್ ಇಂಡಿಯಾ ರೇಡಿಯೋವನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಬಿನಾಕಾ ಗೀತಮಾಲಾ’ : 1952 ರಲ್ಲಿ ನಡೆಸುತ್ತಿದ್ದ ‘ಬಿನಾಕಾ ಗೀತಮಾಲಾ’ ಕಾರ್ಯಕ್ರಮ ಸುಮಾರು ನಾಲ್ಕು ದಶಕಗಳ ಕಾಲ ಮುಂದುವರೆದಿದ್ದು ಇದು ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿತ್ತು.