SK Home Ad
Home ಅಪರಾಧ ಗ್ರಾಮಸ್ಥರ ಧರ್ಮದೇಟಿಗೆ ಮಾನಸಿಕ ಅಸ್ವಸ್ಥ ಬಲಿ

ಗ್ರಾಮಸ್ಥರ ಧರ್ಮದೇಟಿಗೆ ಮಾನಸಿಕ ಅಸ್ವಸ್ಥ ಬಲಿ

0
224
ಧರ್ಮದೇಟು

ಬೆಳಗಾವಿ: ನಡುಬೀದಿಯಲ್ಲಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದು. ಧರ್ಮದೇಟಿಗೆ ಆತ ಬಲಿಯಾದ ಅಮಾನವೀಯ ಘಟನೆ ಬಸವನಕುಡಚಿ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಬಸವನಕುಡಚಿ ಗ್ರಾಮದ ಗಾಂಧಿ ಗಲ್ಲಿ ನಿವಾಸಿ ವಿಶಾಲ್ ಕಲ್ಲಪ್ಪಾ ಪಟಾಯಿ(೨೮) ಎಂದು ಗುರುತಿಸಲಾಗಿದೆ. ಕಳೆದ ಕೆಲ ದಿನಗಳಿಂದ ವಿಶಾಲ ಮಾನಸಿಕ ಅಸ್ವಸ್ಥನಂತೆ ಗ್ರಾಮಗಳಲ್ಲಿ ಓಡಾಡಿ ಸಾರ್ವಜನಿಕರಿಗೆ ತೊಂದರೆ ನೀಡತೊಡಗಿದ್ದ. ಇತ್ತೀಚೆಗೆ 9 ಶಿಕ್ಷಕರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದ.
ಮತ್ತೆ ತನ್ನ ಹುಚ್ಚಾಟ ಶುರುಮಾಡಿದ ಯುವಕನನ್ನು ಗ್ರಾಮಸ್ಥರು ಮರಕ್ಕೆ ಕಟ್ಟಿ ಹಾಕಿ ಮನಬಂದಂತೆ ಥಳಿಸಿ ಗಾಯಗೊಳಿಸಿದ್ದಾರೆ. ಗ್ರಾಮಸ್ಥರ ಧರ್ಮದೇಟಿಗೆ ಗಂಭೀರ ಗಾಯಗೊಂಡ ವಿಶಾಲ್‌ನನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮಂಗಳವಾರ ರಾತ್ರಿ ಸಾವನ್ನಪ್ಪಿದ್ದಾರೆ. ಈ ಘಟನೆ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಧರ್ಮದೇಟು