SK Home Ad
Home ಸುದ್ದಿ ರಾಜ್ಯ ರಾಜ್ಯಸಭೆ ಚುನಾವಣೆ: ಖರ್ಗೆ ಸೇರಿ ನಾಲ್ವರು ಅವಿರೋಧ ಆಯ್ಕೆ

ರಾಜ್ಯಸಭೆ ಚುನಾವಣೆ: ಖರ್ಗೆ ಸೇರಿ ನಾಲ್ವರು ಅವಿರೋಧ ಆಯ್ಕೆ

0
62

ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಾಲ್ವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.

ಒಟ್ಟು ನಾಲ್ಕು ಸ್ಥಾನಗಳಿಗೆ ನಡೆಯಬೇಕಿದ್ದ ಚುನಾವಣೆಯಲ್ಲಿ ಓರ್ವ ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದ್ದು, ನಾಮಪತ್ರ ಹಿಂಪಡೆಯಲು ಬುಧವಾರ ಕಡೆಯ ದಿನವಾದ ಹಿನ್ನೆಲೆ ಕಣದಲ್ಲಿದ್ದ ಮೂವರು ಕಾಂಗ್ರೆಸ್‌ ಮತ್ತು ಓರ್ವ ಬಿಜೆಪಿ ಅಭ್ಯರ್ಥಿ ಅಂತಿಮ ಕಣದಲ್ಲಿ ಇದ್ದರು.

ಕಾಂಗ್ರೆಸ್‌ ಅಭ್ಯರ್ಥಿಗಳಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ್ ಖೇರಾ ಮತ್ತು ಮನ್ಸೂರ್ ಅಲಿ ಖಾನ್ ಹಾಗೂ ಬಿಜೆಪಿಯ ಎಂ. ನಾಗರಾಜ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವಿಶಾಲಾಕ್ಷಿಯವರು ಘೋಷಿಸಿದರು.